ಕೊಡಗು ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ಎಎಸ್ಐ ವಸಂತ ಕುಮಾರ್ ನಿಧನ
admincoorgdaily

ಮಡಿಕೇರಿ;
ಕೊಡಗು ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಂದಿನೆರವಂಡ ವಸಂತ ಕುಮಾರ್ ಇಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ನ್ಯಾಯಾಧೀಶರಾಗಿರುವ ಶ್ರೀಮತಿ ದಮಯಂತಿ ಮತ್ತು ಮಗಳನ್ನು ಅಗಲಿದ್ದಾರೆ.
ನಾಳೆ ಅವರ ಕುಶಾಲನಗರದ ಸ್ವಗೃಹದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಕುಶಾಲನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.