ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಮಿತಿ ಸಭೆ : ಕ್ರಿಸ್‌ಮಸ್ ಗೀತ ಗಾಯನ ಸ್ಪರ್ಧೆಯ ಕುರಿತು ಚರ್ಚೆ : ಮಡಿಕೇರಿ ಅಧ್ಯಕ್ಷರಾಗಿ ಪಿಯೂಷ್ ಪೆರೆರಾ ಆಯ್ಕೆ
admincoorgdaily

ಮಡಿಕೇರಿ ನ.24 : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಜಿಲ್ಲಾ ಸಮಿತಿಯ ಮಾಸಿಕ ಸಭೆಯು ಸೋಮವಾರಪೇಟೆಯ ಜಯವೀರ ಮಾತೆ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ರೋಮನ್ ಕ್ಯಾಥೋಲಿಕ್ ಸಮಿತಿಯ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026ರ ಕ್ರಿಸ್‌ಮಸ್ ಗೀತ ಗಾಯನ ಸ್ಪರ್ಧೆಯ ಕುರಿತು ಚರ್ಚಿಸಲಾಯಿತು. ಸ್ಪರ್ಧೆಯ ಸಂಚಾಲಕ ಜೋಕಿಂ ವಾಸ್ ಅವರು ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಸಭೆಗೆ ನೀಡಿದರು.
ಎಸ್.ಎಂ.ಡಿಸಿಲ್ವಾ ಅವರು ಕಾರ್ಯಕ್ರಮಕ್ಕೆ ಸರ್ವರ ಸಹಕಾರವನ್ನು ಕೋರಿದರು. ಲಾರೆನ್ಸ್ ಅವರು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಜಾನ್ಸನ್ ಪಿಂಟೋ ಮಾತನಾಡಿ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗುರುಗಳ ಮಾರ್ಗದರ್ಶನ ಹಾಗೂ ಸಹಕಾರವನ್ನು ಸ್ಮರಿಸಿದರು. ಮುಂಬರುವ ದಿನಗಳಲ್ಲಿ ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸಭೆಗಳಿಗೆ ಹಾಜರಾಗಬೇಕು. ಸಂಘದ ಬೆಳವಣಿಗೆಗೆ ಪ್ರತಿಯೊಬ್ಬ ಜಿಲ್ಲಾ ಸಮಿತಿ ಸದಸ್ಯರು ಶ್ರಮಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ಮಡಿಕೇರಿ ತಾಲ್ಲೂಕು ಅಧ್ಯಕ್ಷರನ್ನಾಗಿ ಪಿಯೂಷ್ ಪೆರೆರಾ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಾರ್ಜೆಂಟ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಡೆನ್ನಿಲ್ ವರ್ಗೀಸ್ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಹಿಂದಿನ ಮಾಸಿಕ ಸಭೆಯ ನಡಾವಳಿಯನ್ನು ಓದಿ ಅಂಗೀಕರಿಸಲಾಯಿತು.