Kodagu

ದಸರಾ ಪ್ಯಾರಾ ಪಂಜ ಕುಸ್ತಿಯಲ್ಲಿ ಕೊಡಗಿನ ಹಸ್ಸನ್ ಗೆ ಚಿನ್ನ

admincoorgdaily

ದಸರಾ ಪ್ಯಾರಾ ಪಂಜ ಕುಸ್ತಿಯಲ್ಲಿ ಕೊಡಗಿನ ಹಸ್ಸನ್ ಗೆ ಚಿನ್ನ
ಮಡಿಕೇರಿ;ಮೈಸೂರು ದಸರಾ ಕ್ರೀಡಾಕೂಟದ ಅಂಗವಾಗಿ ದಿನಾಂಕ 15-10-2026 ರಂದು ನಡೆದ ರಾಜ್ಯಮಟ್ಟದ ಪ್ಯಾರಾ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷಚೇತನ ಕೆ.ಎಂ.ಹಸ್ಸನ್ ಅವರು ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಲಗೈ 60 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.