Kodagu

ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ

admincoorgdaily

ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ
ಮಡಿಕೇರಿ: ಅಮೃತ ಸಿನಿಕ್ರಾಫ್ಟ್ಸ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಶರಟನ್ ಗ್ರಾಂಡ್ ಹೋಟೆಲ್ ಬ್ರಿಗೇಡ್ ಗೇಟ್‌ವೇನಲ್ಲಿ ಆಯೋಜಿಸಲಾಗಿದ್ದ ‘ಎಸಿ ಮಿಸ್ & ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ (Mrs India Women of Substance) ಆವೃತ್ತಿ-9 ರ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯ ‘ಮಿಸೆಸ್’ ವಿಭಾಗದಲ್ಲಿ ಕೊಡಗಿನ ಪೊನ್ನಂಪೇಟೆಯ ಕರ್ತಮಾಡ ಶಮಾ ಅಪ್ಪಣ್ಣ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡು ಸಾಧನೆ ಮಾಡಿದ್ದಾರೆ.

    ಸೆಪ್ಟೆಂಬರ್ 27ರಂದು ನಡೆದ ಅಂತಿಮ ಸ್ಪರ್ಧೆಯಲ್ಲಿ ಶಮಾ ಅಪ್ಪಣ್ಣ ಅವರು ತಮ್ಮ ಪ್ರತಿಭೆ ಮತ್ತು ಜಾಣ್ಮೆಯಿಂದ ತೀರ್ಪುಗಾರರ ಗಮನ ಸೆಳೆದು ವಿಜೇತರಾಗಿ ಹೊರಹೊಮ್ಮಿದರು.
    ಇವರು ಪೊನ್ನಂಪೇಟೆಯ ಕರ್ತಮಾಡ ಡಿಕ್ಕಿ ಅಪ್ಪಣ್ಣ ಅವರ ಧರ್ಮಪತ್ನಿಯಾಗಿದ್ದು, ಹೋದವಾಡ  ಗ್ರಾಮದ ಚೌರೀರ ಬೋಪಯ್ಯ ಹಾಗೂ ಶಾರದಾ ದಂಪತಿಯ ಪುತ್ರಿಯಾಗಿದ್ದಾರೆ.