SIR KARNATAKA

ಕೊಡಗು: 58,893 ಮತದಾರರಿಗೆ SIR ನೋಟಿಸ್ - ವಿತರಣೆಯಾಗಿದ್ದು ಕೇವಲ 5,096 ಮಾತ್ರ

admincoorgdaily

ಕೊಡಗು: 58,893 ಮತದಾರರಿಗೆ SIR ನೋಟಿಸ್ - ವಿತರಣೆಯಾಗಿದ್ದು ಕೇವಲ 5,096 ಮಾತ್ರ
ಮಡಿಕೇರಿ: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 58,893 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ.

208-ಮಡಿಕೇರಿ ಕ್ಷೇತ್ರದಲ್ಲಿ 9,252 Anomalies ಮತ್ತು 9,533 No Mapping ಸೇರಿ ಒಟ್ಟು 18,785 ಮಂದಿಗೆ ಹಾಗೂ 209-ವಿರಾಜಪೇಟೆ ಕ್ಷೇತ್ರದಲ್ಲಿ 26,558 Anomalies ಮತ್ತು 13,550 No Mapping ಸೇರಿ 40,108 ಮಂದಿಗೆ ನೋಟಿಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 58,893 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ.

ನೋಟಿಸ್ ವಿತರಣೆ ಪ್ರಗತಿ (ಸೆ.3 ರ ವರೆಗೆ):
ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಜಿಲ್ಲೆಯಲ್ಲಿ ಒಟ್ಟು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಒಟ್ಟು 58,884 ನೋಟಿಸ್‌ಗಳಲ್ಲಿ ಈವರೆಗೆ 58,883 ನೋಟಿಸ್ Generate ಆಗಿದ್ದು, 5,096 ನೋಟಿಸ್‌ಗಳನ್ನು ವಿತರಿಸಲಾಗಿದೆ. ಇನ್ನೂ 53,787 ನೋಟಿಸ್‌ಗಳು ವಿತರಣೆ ಬಾಕಿ ಇವೆ.

- ಮಡಿಕೇರಿಯಲ್ಲಿ 18,779 ನೋಟಿಸ್ ಜನರೇಟ್ ಆಗಿದ್ದು, 3,286 ವಿತರಣೆಯಾಗಿದೆ.
- ವಿರಾಜಪೇಟೆಯಲ್ಲಿ 40,104 ನೋಟಿಸ್ ಜನರೇಟ್ ಆಗಿದ್ದು, 1,810 ವಿತರಣೆಯಾಗಿದೆ.

ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶ:
ಅರ್ಹತಾ ದಿನಾಂಕ 01-10-2026 ಆಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು 24-08-2026 ರಿಂದ 23-09-2026 ರ ವರೆಗೆ ಸಲ್ಲಿಸಬಹುದು.
ಹೊಸದಾಗಿ ಹೆಸರು ಸೇರಿಸಲು ನಮೂನೆ-6, ಅನಿವಾಸಿ ಭಾರತೀಯರು ಹೆಸರು ಸೇರಿಸಲು ನಮೂನೆ-6ಎ ಮತ್ತು ಹೆಸರು ತೆಗೆಯಲು ನಮೂನೆ-7 ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.