Kodagu

ಕೊಡಗು ವಿವಿ ಕುಲಪತಿಗೆ ಪ್ರತಿಷ್ಠಿತ 'ದಿ AGRI100-2026' ರಾಷ್ಟ್ರೀಯ ಪ್ರಶಸ್ತಿ

admincoorgdaily

ಕೊಡಗು ವಿವಿ ಕುಲಪತಿಗೆ ಪ್ರತಿಷ್ಠಿತ 'ದಿ AGRI100-2026' ರಾಷ್ಟ್ರೀಯ ಪ್ರಶಸ್ತಿ
ಕುಶಾಲನಗರ;ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರ್ ಅವರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ 'ದಿ AGRI100-2026' ಪ್ರಶಸ್ತಿ ಲಭಿಸಿದೆ.

ಭಾರತದ ಕೃಷಿ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತಿರುವ 100 ದೂರದರ್ಶಿ ನಾಯಕರ ಪಟ್ಟಿಯಲ್ಲಿ ಡಾ. ಅಲೂರ್ ಸ್ಥಾನ ಪಡೆದಿದ್ದಾರೆ. ಕೃಷಿ ಶಿಕ್ಷಣ, ಸಂಶೋಧನೆ ಮತ್ತು ತೋಟಗಾರಿಕಾ ಕ್ಷೇತ್ರಗಳ ಪರಿವರ್ತನೆಗೆ ಸಲ್ಲಿಸಿದ ಅಸಾಧಾರಣ ಕೊಡುಗೆ ಹಾಗೂ ನಾಯಕತ್ವವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಭಾರತದ ಅಗ್ರಣಿ ಕೃಷಿ ಮಾಧ್ಯಮ ಸಂಸ್ಥೆ 'ಕೃಷಿ ಜಾಗರಣ್' ಈ ಪ್ರಶಸ್ತಿಯನ್ನು ನೀಡುತ್ತಿದ್ದು, ದೇಶಾದ್ಯಂತ ಸಮಗ್ರ ಸಂಶೋಧನೆ ಮತ್ತು ಮಹಾ ನ್ಯಾಯಮಂಡಳಿಯ ಮೌಲ್ಯಮಾಪನದ ನಂತರ ಆಯ್ಕೆ ಮಾಡಲಾಗುತ್ತದೆ.

ಈ ಪ್ರಶಸ್ತಿಯನ್ನು ಅ.1 ರಂದು ಬೆಂಗಳೂರಿನ BIEC ಕೇಂದ್ರದಲ್ಲಿ ನಡೆಯಲಿರುವ 'ಅಗ್ರಿಕಾನ್-ಹಾರ್ಟಿಕನೆಕ್ಟ್ ಇಂಡಿಯಾ 2026' ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಕೃಷಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅ.1 ರಿಂದ 3 ರವರೆಗೆ ನಡೆಯಲಿರುವ ಈ ಮೇಳವನ್ನು ಮೆಸ್ಸೆ ಮ್ಯೂನಿಚೆನ್ ಇಂಡಿಯಾ ಮತ್ತು ಹಾರ್ಟಿಕನೆಕ್ಟ್ ಗ್ಲೋಬಲ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿವೆ.