ಕೊಡಗು ವಿವಿ ಅಂತರ ಕಾಲೇಜು ಪಂದ್ಯಾಟ:ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜಿಗೆ ದ್ವಿತೀಯ ಸ್ಥಾನ
admincoorgdaily

ಮಡಿಕೇರಿ:-ಕೊಡಗು ವಿಶ್ವವಿದ್ಯಾಲಯ ಮತ್ತು ದೈಹಿಕ ಶಿಕ್ಷಣ ವಿಭಾಗ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಕೊಡಗು ವಿಶ್ವವಿದ್ಯಾಲಯ ಅಂತರ ಕಾಲೇಜು ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟ ನಡೆಯಿತು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಹಿಳೆಯರ ಬ್ಯಾಡ್ಮಿಂಟನ್ ಹಾಗೂ ಪುರುಷರ ಟೇಬಲ್ ಟೆನ್ನಿಸ್ ಪಂದ್ಯಾಟಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಆಟಗಾರರ ವಿವರ: ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯದಲ್ಲಿ ತೃತೀಯ ಬಿ.ಎ. ಗಾನಶ್ರೀ, ದ್ವಿತೀಯ ಬಿಬಿಎ ರಕ್ಷಿತ ಪೊನ್ನಮ್ಮ, ದ್ವಿತೀಯ ಬಿ.ಕಾಂ ಸಾವಿತ್ರಿ ಎಂ.ಪಿ., ದ್ವಿತೀಯ ಬಿಬಿಎ ಫಾತಿಮತುಲ್ ಜೋರಾ.
ಪುರುಷರ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ದ್ವಿತೀಯ ಬಿ.ಕಾಂ ಪ್ರತೀನ್, ದ್ವಿತೀಯ ಬಿಬಿಎ ಪ್ರೀತಮ್, ಪ್ರಥಮ ಬಿ.ಕಾಂ ಆದಿಬ್ ವಾಸಿಮ್ ಹಾಗೂ ಪ್ರಥಮ ಬಿಸಿಎ ಹೇಮಂತ್.
ಪ್ರಾಂಶುಪಾಲರಾದ ಮೇಜರ್ ಪ್ರೊ.ರಾಘವ ಬಿ., ಕ್ರೀಡಾ ವಿಭಾಗದ ಸಂಯೋಜಕರಾದ ಡಾ.ತಳವಾರ್ ಬಿ.ಎಚ್. ಹಾಗೂ ದೈಹಿಕ ಶಿಕ್ಷಣ ವಿಭಾಗದ ಪಿ.ಸಿ.ರಮೇಶ ಇತರರು ಇದ್ದರು.