ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಪೀಟು ಕಾರ್ಯಪ್ಪ ಅವರನ್ನು ಅಭಿನಂದಿಸಿದ ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್
admincoorgdaily

ಮಡಿಕೇರಿ ಅ.19 : ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾತಂಡ ಪೀಟು ಕಾರ್ಯಪ್ಪ ಅವರನ್ನು ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ ನ ನಿರ್ದೇಶಕರೂ ಆಗಿರುವ ಪೀಟು ಕಾರ್ಯಪ್ಪ ಅವರ ಬೆಳೆಗಾರರ ಪರವಾದ ಸೇವೆಗೆ ಯಶಸ್ಸು ದೊರೆಯಲಿ ಎಂದು ಪ್ರಮುಖರು ಶುಭ ಹಾರೈಸಿದರು.
ನಗರದಲ್ಲಿರುವ ಕ್ರೆಡಿಟ್ ಕೋಆಪರೇಟಿವ್ ಕಚೇರಿಯಲ್ಲಿ ಅಭಿನಂದಿಸುವ ಸಂದರ್ಭ ಸಂಘದ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ನಿರ್ದೇಶಕರುಗಳಾದ ಕುಕ್ಕೇರ ಜಯ ಚಿಣ್ಣಪ್ಪ, ಉದಿಯಂಡ ಚಂಗಪ್ಪ ಮತ್ತಿತರರು ಹಾಜರಿದ್ದರು.