State News

ಸಾಂಸ್ಕೃತಿಕ ನಗರಿಯಲ್ಲಿ ಕೊಡವ ಸಂಸ್ಕೃತಿ ಅನಾವರಣ: ಒತ್ತೋರ್ಮೆರ ಕೊಡವ ಕೂಟದಿಂದ ಮೆರುಗು

admincoorgdaily

ಸಾಂಸ್ಕೃತಿಕ ನಗರಿಯಲ್ಲಿ ಕೊಡವ ಸಂಸ್ಕೃತಿ ಅನಾವರಣ: ಒತ್ತೋರ್ಮೆರ ಕೊಡವ ಕೂಟದಿಂದ ಮೆರುಗು
ಮೈಸೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ನಡೆದ ಜಾಥಾದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸದಸ್ಯರು ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಯನ್ನು ಅನಾವರಣಗೊಳಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಅರಮನೆ ಮೈದಾನದಿಂದ ಬನ್ನಿಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಕೊಡವ ಸಂಸ್ಕೃತಿಯ ಪ್ರತೀಕವಾದ ತಳಿಯತಕ್ಕಿ ಬೊಳ್ಚ ಹಿಡಿದು, ತಾಳ, ದುಡಿ, ಕೊಟ್ಟ್ ಪಾಟ್ ನೊಂದಿಗೆ ಕೊಡವ ಸಂಪ್ರದಾಯವನ್ನು ಬಿಂಬಿಸಲಾಯಿತು. ಸದಸ್ಯರು ಕೊಡವರ ಸಾಂಪ್ರದಾಯಿಕ ಆಯುಧಗಳಾದ ಒಡಿಕತ್ತಿ, ಬರ್ಜಿ ಹಿಡಿದು, ವಾಲಗದ ನಾದಕ್ಕೆ ಹೆಜ್ಜೆ ಹಾಕುವ ಮೂಲಕ ಕೊಡಗಿನ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು.

ಕೊಡವ ಸಂಸ್ಕೃತಿಯ ವಿಶಿಷ್ಟ ಆಚರಣೆಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆ ಹಾಗೂ ವಾಲಗದ ನಾದವು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷೆ ಮಾತಂಡ ಕುಶಿ ಉನ್ನತಿ, ಕಾರ್ಯದರ್ಶಿ ಮಾಚಂಗಡ ಸಚಿನ್ ತಿಮ್ಮಯ್ಯ, ಸಹ ಕಾರ್ಯದರ್ಶಿ ಅಳ್ಳಂಡ ಶಹನಾ ಚೋಂದಮ್ಮ, ನಿರ್ದೇಶಕರಾದ ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಪೊನ್ನೋಲತಂಡ ಶರಣು ತಮ್ಮಯ್ಯ, ಕರ್ನಂಡ ಧನುಶ್ರೀ, ಮಾಚಂಗಡ ಭೂಮಿಕಾ, ಸದಸ್ಯರಾದ ಮೂಕೊಂಡ ಸಂಜನಾ ದಮಯಂತಿ, ಮುದ್ದಿಯಾಡ ಕರಣ್ ಕಾವೇರಪ್ಪ, ನಡಿಕೇರಿಯಂಡ ದಿಯ ದೇಚಮ್ಮ, ನಡಿಕೇರಿಯಂಡ ಜೀಯಾ ಬೋಜಮ್ಮ, ಕಾಯಪಂಡ ಸೋನಿಕ ದೇಚಮ್ಮ, ಮೂಕೊಂಡ ಕಾವೇರಮ್ಮ, ಕೊಟ್ಟಂಗಡ ಬಿಪಿನ್ ಬಿದ್ದಪ್ಪ ಹಾಗೂ ಹರಿಹರ ವಾಲಗ ತಂಡದ ನವೀನ್, ಕಾರ್ಯಪ್ಪ, ರಮೇಶ್, ಪ್ರವೀಣ್, ದೇವ್ ಭಾಗವಹಿಸಿದ್ದರು.

ಕೊಡಗಿನ ವಾಲಗ ತಂಡದ ಪ್ರಾಯೋಜಕತ್ವವನ್ನು ಚೇಂದ್ರಿಮಾಡ ಗಣೇಶ್ ನಂಜಪ್ಪ ವಹಿಸಿದ್ದರು.