Kodagu

32 ನೇ ಕೋಲ್ಕತ್ತಾ ಚಲಚಿತ್ರೋತ್ಸವಕ್ಕೆ "ಕೋಟೆ ಬೆಟ್ಟ" ಚಲನಚಿತ್ರ ಆಯ್ಕೆ : ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಯಶೋಧ ಪ್ರಕಾಶ್ ದಂಪತಿಗೆ ಮತ್ತೊಂದು ಹೆಗ್ಗಳಿಕೆ

admincoorgdaily

32 ನೇ ಕೋಲ್ಕತ್ತಾ ಚಲಚಿತ್ರೋತ್ಸವಕ್ಕೆ "ಕೋಟೆ ಬೆಟ್ಟ" ಚಲನಚಿತ್ರ ಆಯ್ಕೆ : ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಯಶೋಧ ಪ್ರಕಾಶ್ ದಂಪತಿಗೆ ಮತ್ತೊಂದು ಹೆಗ್ಗಳಿಕೆ
ಮಡಿಕೇರಿ : ಸ್ವಸ್ತಿಕ್ ಎಂಟರ್ಟೈನ್ಮೆಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಿಸಿ ನಿರ್ದೇಶಿಸಿರುವ ಕೊಡವ ಚಲನಚಿತ್ರ "ಕೋಟೆ ಬೆಟ್ಟ" 32 ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಡಿ.16 ರಿಂದ 23 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಈ ಪ್ರತಿಷ್ಠಿತ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮಾನ್ಯತೆ ಪಡೆದ ಚಿತ್ರಗಳ ರಾಷ್ಟ್ರೀಯ ವಿಭಾಗದಲ್ಲಿ ಕೊಡವ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿದೆ. 

ಕೋಲ್ಕತ್ತಾದ ನಂದನ್ ಅಕಾಡೆಮಿ ಚಿತ್ರಮಂದಿರದಲ್ಲಿ "ಕೋಟೆ ಬೆಟ್ಟ" ಚಿತ್ರ ಎರಡು ಪ್ರದರ್ಶನ ಕಾಣಲಿದೆ. 2016 ರಿಂದ ಚಿತ್ರಂಗದ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಅಂತರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ಅವರಿಗೆ ಈ ಆಯ್ಕೆ ಮತ್ತೊಂದು ಹೆಗ್ಗಳಿಕೆಯಾಗಿದೆ.

"ಕೋಟೆ ಬೆಟ್ಟ" ಚಿತ್ರ ಕಾಲೂರು, ಕೋಟೆ ಬೆಟ್ಟ, ಶಿರಂಗಳ್ಳಿ, ಮಾದಾಪುರ, ಗರ್ವಾಲೆ, ಮೈಸೂರು ಮತ್ತು ಮಡಿಕೇರಿಯ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಮಕ್ಕಳ ಮನಸ್ಸಿನ ಮೇಲೆ ಬೆಳಕು ಚೆಲ್ಲಿರುವ ಈ ಚಿತ್ರದಲ್ಲಿ ಕೊಡಗಿನ ಪರಿಸರ ಮತ್ತು ಕೊಡವ ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ.

ಚಿತ್ರದಲ್ಲಿ ಈ ಚಿತ್ರದ ಸಹ ನಿರ್ಮಾಪಕರಾಗಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಅಪ್ಪಂಡೆರಂಡ ತೇಜುಪೊನ್ನಪ್ಪ, ತಾಂತಂಡ ಪ್ರಭಾ ನಾಣಯ್ಯ, ಕೋಳುಮಾಡಂಡ ಸತೀಶ್ ನಾಣಯ್ಯ, ಮಂದೆಯAಡ ರಜಿ ಬೆಳ್ಯಪ್ಪ, ಕಾಡ್ಯಮಾಡ ಸುಮನ್, ಕಾಳಮಂಡ ಜಗತ್, ತಂಬುಕುತ್ತೀರ ಗಪ್ಪು ಸೋಮಯ್ಯ, ಬುಟ್ಟಂಡ ಕಶ್ಮಾ ಅಯ್ಯಣ್ಣ, ಮಂಡೀರ ಪದ್ಮ ಬೋಪಯ್ಯ, ಮಂಜುಳ ಮೈಸೂರು, ಈರಮಂಡ ವಿಜಯ್ ಉತ್ತಯ್ಯ, ಹರಿಣಿ ವಿಜಯ್, ಬಿ.ಜಿ.ಅನಂತಶಯನ, ಸ್ಮಿತ ಉಡುವೇರ, ನಾಪಂಡ ಅರುಣ್ ದೇವಯ್ಯ, ನಾಪಂಡ ಚಿಣ್ಣಪ್ಪ, ವಿದಿತ್ ಪಾಸುರ, ಉಡುವೇರ, ಶಿವ, ಮೌನಿ ಬೋಪಯ್ಯ, ಮಂದೆಯಂಡ ಭೀಮಣಿ, ಮಂದೆಯಂಡ ರಾಯ್, ಮಂದೆಯಂಡ ಮಣಿ, ಮೋರ್ಕಂಡ ತಿಮ್ಮಯ್ಯ, ಉಡುವೇರ ಭೀಮಯ್ಯ, ಮುಖ್ಯ ಬಾಲ ನಟರಾಗಿ ಕೊಟ್ಟುಕತ್ತಿರ ತೇಜಲ್ ಕಾರ್ಯಪ್ಪ, ಕೊಟ್ಟುಕತ್ತಿರ ತನಂ ಕಾರ್ಯಪ್ಪ, ಹೊಟ್ಟೆಯಂಡ ಆಚಲ್ ಅಪ್ಪಚ್ಚು, ಉಡುವೇರ ಶಾನ್ ಬೋಜಮ್ಮ, ಮಂದೆಯಂಡ ತಿಮ್ಸ್ ಬೋಜಮ್ಮ, ಉಡುವೇರ ಸಾತ್ವಿಕ್ ಗಣಪತಿ, ಮಂದೆಯAಡ ಧನುಷ್ ಕಾರ್ಯಪ್ಪ, ತಂಬುಕುತ್ತೀರ ಪೊನ್ನಮ್ಮ, ಮುದ್ದೆಯಡ ನಕ್ಷ ತಂಗಮ್ಮ, ಮಂದೆಯಂಡ ಮನಿಷ್, ಮಾನ್ಯ, ಧನುಷ್, ರಾಜಿ, ಶ್ರೀನಿಧಿ, ಚೆರಿಯಪಂಡ ಪರೀಕ್ಷಿತ್ ಪೆಮ್ಮಯ್ಯ, ಮೂಕಚಂಡ ನಕ್ಷ ನೀಲಮ್ಮ ಅಭಿನಯಿಸಿದ್ದಾರೆ.  

ಛಾಯಾಗ್ರಾಹಕರಾಗಿ ಪ್ರದೀಪ್ ಆರ್ಯನ್, ಸಂತೋಷ್ ಬಪ್ಪು, ವಿಜಯ್ ಬರ್ಮಾಲಿ ಕಾರ್ಯನಿರ್ವಹಿಸಿದ್ದು, ವಿಠಲ್ ರಂಗದೋಳ್ ಸಂಗೀತ ನಿರ್ದೇಶನವಿದೆ. ಟಿ.ಮುತ್ತುರಾಜ್ ಸಂಕಲನ, ಸ್ಯಾಮ್ಸನ್ ವಿಎಫ್‌ಎಕ್ಸ್, ಗಾರ್ಗಿ ಕಾರೆಹಕ್ಲು ಚಿತ್ರಕಥೆ, ಮುಕ್ಕಾಟಿರ ಮೌನಿ ನಾಣಯ್ಯ ಹಾಡು ಬರೆದಿದ್ದಾರೆ. ಬಯೋವಂಡ ಬೀನು ಸಚಿನ್, ಕೊಟ್ಟುಕತ್ತಿರ ಪ್ರತೀಶ್ ಅಯ್ಯಪ್ಪ ಹಾಡುಗಳನ್ನು ಹಾಡಿದ್ದು, ಕೋಳುಮಾಡಂಡ ನಾಣಯ್ಯ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. 

ಚಿತ್ರರಂಗದಲ್ಲಿ ಖ್ಯಾತಿ;

ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ಅವರು ಕೊಡವ ಮತ್ತು ಕನ್ನಡ ಚಿತ್ರರಂಗದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕೊಡಗಿನ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ದಂಪತಿಗಳಾಗಿದ್ದಾರೆ.
ಕAದೀಲು ಇವರ ನಿರ್ಮಾಣದ ಮತ್ತು ಯಶೋಧ ಪ್ರಕಾಶ್ ನಿರ್ದೇಶನದ ಕನ್ನಡ ಚಲನಚಿತ್ರ ಕಂದೀಲು 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ "ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಇವರು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮೊದಲ ಕೊಡವ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. "ನಾಡ ಪೆದ ಆಶಾ" ಕೊಡವ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಮತ್ತು "ಅತ್ಯುತ್ತಮ ನಿರ್ದೇಶಕ" ರಾಜ್ಯ ಪ್ರಶಸ್ತಿಗಳು ಲಭಿಸಿವೆ. 
ಸಾಮಾಜಿಕ ಕಳಕಳಿಯುಳ್ಳ ಹಾಗೂ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಸುಮಾರು 23ಕ್ಕೂ ಹೆಚ್ಚು ಕನ್ನಡ ಮತ್ತು ಕೊಡವ ಸಿನಿಮಾಗಳನ್ನು, ಕೊಡವ ಸಾಕ್ಷ್ಯ ಚಿತ್ರಗಳನ್ನು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ದಂಪತಿ ನೀಡಿದ್ದಾರೆ. ಇದು ಕೊಡಗಿನ ಕಲಾ ಪ್ರಪಂಚಕ್ಕೆ ಇವರು ನೀಡಿರುವ ಅಮೋಘ ಕೊಡುಗೆಯಾಗಿದೆ.