ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಘಟನಾ ಸೃಜನ್ ಅಭಿಯಾನ ಸಮಿತಿ ಸದಸ್ಯರಾಗಿ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ನೇಮಕ
admincoorgdaily

ಮಡಿಕೇರಿ;ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ರಚಿಸಲಾಗಿರುವ ಸಂಘಟನಾ ಸೃಜನ್ ಅಭಿಯಾನ 02 ಆಯ್ಕೆ ಸಮಿತಿಗೆ ಕೊಡಗಿನ ಹಿರಿಯ ನಾಯಕ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪತ್ರದ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಸಮರ್ಪಣಾಭಾವದ ಶ್ರಮ, ಬದ್ಧತೆ ಮತ್ತು ಪಕ್ಷದ ಕೊಡುಗೆಯನ್ನು ಪರಿಗಣಿಸಿ ಮಂಜುನಾಥ್ ಗುಂಡೂರಾವ್ ಅವರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.