Kodagu

ಕೃಷ್ಣ ಜನ್ಮಾಷ್ಠಮಿ ಮತ್ತು 3ನೇ ವರ್ಷದ ಶ್ರೀ ಕೃಷ್ಣ ಹಾಗೂ ರಾಧ ಛದ್ಮವೇಷ ಸ್ಪರ್ಧೆ

admincoorgdaily

ಕೃಷ್ಣ ಜನ್ಮಾಷ್ಠಮಿ ಮತ್ತು 3ನೇ ವರ್ಷದ ಶ್ರೀ ಕೃಷ್ಣ ಹಾಗೂ ರಾಧ ಛದ್ಮವೇಷ ಸ್ಪರ್ಧೆ
ಕುಶಾಲನಗರ:
ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 7ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 7ನೇ ವರ್ಷದ ಶ್ರೀ.ಕೃಷ್ಣ ಜನ್ಮಾಷ್ಠಮಿ ಮತ್ತು 3ನೇ ವರ್ಷದ ಶ್ರೀ.ಕೃಷ್ಣ ಹಾಗೂ ರಾಧ ಛದ್ಮವೇಷ ಸ್ಪರ್ಧೆಯು ಶುಕ್ರವಾರದಂದು ದೇವಾಲಯದ ಸಭಾಂಗಣದಲ್ಲಿ ನಡೆಯಿತು. 

ಕಾರ್ಯಕ್ರಮದ ಅಂಗವಾಗಿ ಶ್ರೀ.ಗಣಪತಿ ಮತ್ತು ಗೋಪಾಲಕೃಷ್ಣ ದೇವರುಗಳಿಗೆ ಹೋಮ ಸಹಿತವಾಗಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು ದೇವಾಲಯದ ಪ್ರಧಾನ ಆರ್ಚಕರಾದ ನರಸಿಂಹ ಉಪದ್ಯಾಯ ಅವರೊಂದಿಗೆ ಪ್ರಸನ್ನ ಭಟ್ ಮತ್ತು ಸಂತೋಷ್ ಹೆಬ್ಬಾರ್ ಅವರುಗಳು ವಿಶೇಷ ಪೂಜೆ ಬೆಣ್ಣೆ ಅಲಂಕಾರ ಗಣಪತಿ ಹೋಮ, ಶ್ರೀಕೃಷ್ಣ ಮಂತ್ರ ಹೋಮ ಬಳಿಕ ಹಾಲಭಿಷೇಕ, ಹೂವಿನ ಅಲಂಕಾರದೊಂದಿಗೆ ಮಹಾಪೂಜೆಯನ್ನು ನೆರವೇರಿಸಲಾಯಿತು. 

ಕೃಷ್ಣ ಅಷ್ಟಮಿ ಅಂಗವಾಗಿ 5 ವರ್ಷದ ಒಳಪಟ್ಟ ಮತ್ತು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು 5 ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ ನಿಧಿಯ ಸಂದೀಪ್, ಈತಿಕ್ಷ ಮತ್ತು ಜ್ಞಾನವಿಕ ಪಟೇಲ್ ಮೊದಲ 3 ಸ್ಥಾನಗಳಿಗೆ ಭಾಜನರಾದರು. 

5 ವರ್ಷ ಮೇಲ್ಪಟ್ಟ ಮಕ್ಕಳ ಸ್ಪರ್ಧೆಯಲ್ಲಿ ಪ್ರತಿಕ್ಷ ಪೂಜಾರಿ, ಆರಾಧ್ಯ ಮತ್ತು ದೀಕ್ಷಾ ಮೊದಲ 3 ಸ್ಥಾನಗಳಿಗೆ ಭಾಜನರಾದರು. ತೀರ್ಪುಗಾರರಾಗಿ ಕವಿತ ಪ್ರಭಾಕರ್, ರಾಮಚಂದ್ರ ಮತ್ತು ಬಿ.ಸಿ.ದಿನೇಶ್ ನಿರ್ವಹಿಸಿದರು. ಸ್ಪರ್ಧೆಗೆ 2 ವಿಭಾಗಗಳಿಂದ 46 ಮಂದಿ ಮಕ್ಕಳು ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು. 
ಕಾರ್ಯಕ್ರಮದಲ್ಲಿ ಶ್ರೀ.ಮಹಾಗಣಪತಿ ಮತ್ತು ಗೋಪಾಲಕೃಷ್ಣ ದೇವಸ್ಥಾನದ ಸಮಿತಿಯ ಅಧ್ಯಕ್ಷ ದಾಸಂಡ ರಮೇಶ್, ಕಾರ್ಯದರ್ಶಿ ಶಿವಪ್ಪ ಕಾರ್ಯಕ್ರಮದ ಅಯೋಜಕರಾದ ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ, ರಾಮಚಂದ್ರ, ಪ್ರಕಾಶ್, ಚೇತನ್, ಸತೀಶ್, ಸಿಜು, ರವಿ, ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.