Kodagu

ಮಿಕ್ಸ್ ಬಾಕ್ಸಿಂಗ್‌ನಲ್ಲಿ ಕೃತನ್ ಹಾಗೂ ಸಂದೀಪ್ ಗೆ ಬೆಳ್ಳಿ ಪದಕ

admincoorgdaily

ಮಿಕ್ಸ್ ಬಾಕ್ಸಿಂಗ್‌ನಲ್ಲಿ ಕೃತನ್ ಹಾಗೂ ಸಂದೀಪ್ ಗೆ ಬೆಳ್ಳಿ ಪದಕ
ಮಡಿಕೇರಿ ಅ.30 : ಸೋಮವಾರಪೇಟೆಯಲ್ಲಿ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಪ್ರಥಮ ರಾಜ್ಯ ಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ನಾಪೋಕ್ಲುವಿನ ಗಿರೀಶ್ ಬಿ.ಎಸ್, ಕವಿತ ಬಿ.ಜಿ ದಂಪತಿಯ ಪುತ್ರ ಬಿ.ಜಿ.ಕೃತನ್ ಹಾಗೂ ಬೆಟ್ಟಗೇರಿಯ ಚಂದ್ರಶೇಖರ್, ನಳಿನಿ ದಂಪತಿಯ ಪುತ್ರ ಸಂದೀಪ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ಅವರ ನೇತೃತ್ವದಲ್ಲಿ ನಡೆದ ಈ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕೃತನ್ ಹಾಗೂ ಸಂದೀಪ್ ಗೆ ಬೆಟ್ಟಗೇರಿಯ ಕರಾಟೆ ತರಬೇತುದಾರ ಬಿ.ಎ.ಆನಂದ ಪೂಜಾರಿ ಅವರು ಮಾರ್ಗದರ್ಶನ ನೀಡಿದ್ದರು.