Kodagu

ಕೂಡುಮಂಗಳೂರು ಗ್ರಾಮ ಪಂಚಾಯತಿ‌ ವ್ಯಾಪ್ತಿಯಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆಗಾಗಿ ಕ.ರ.ವೇ.ಪದಾಧಿಕಾರಿಗಳ ಒತ್ತಾಯ

admincoorgdaily

ಕೂಡುಮಂಗಳೂರು ಗ್ರಾಮ ಪಂಚಾಯತಿ‌ ವ್ಯಾಪ್ತಿಯಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆಗಾಗಿ ಕ.ರ.ವೇ.ಪದಾಧಿಕಾರಿಗಳ ಒತ್ತಾಯ
ಕುಶಾಲನಗರ :ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ನವಗ್ರಾಮ ದಲ್ಲಿ ಏಳುನೂರಕ್ಕೂ ಹೆಚ್ಚು ಮನೆಗಳಿದ್ದು 15 ವರ್ಷಗಳಿಂದ ರಸ್ತೆ ಇದ್ದರೂ ಚರಂಡಿಯ ವ್ಯವಸ್ಥೆ ಸರಿ ಇಲ್ಲದ ಕಾರಣ ರಸ್ತೆಯ ಮೇಲೆ ಚರಂಡಿಯ ನೀರು ಹರಿಯುತ್ತಿದ್ದು ಇದರಿಂದ ನವಗ್ರಾಮದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದ್ದು ಅವರ ದೂರಿನ ಮೇರೆಗೆ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕೂಡಮಂಗಳೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದ್ದಾರೆ .
ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಕರವೇ ವತಿಯಿಂದ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಮುಂದೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ 
ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ.ಚಂದ್ರು, 
ಪುಟ್ಟಸ್ವಾಮಿ
ತಾಲ್ಲೂಕು ಅಧ್ಯಕ್ಷರು,
ರಂಗಸ್ವಾಮಿ, ತಾಲ್ಲೂಕು ಉಪಾಧ್ಯಕ್ಷರು,ಪುಟ್ಟಮ್ಮ 
ತಾಲ್ಲೂಕು ಗೌರವ ಅಧ್ಯಕ್ಷರು,ಎಂಎಸ್ ಸತೀಶ್ 
ಜಿಲ್ಲಾ ಕಾರ್ಯದರ್ಶಿ,ಪ್ರೇಮ 
ಜಂಟಿ ಕಾರ್ಯದರ್ಶಿ,
ಕಮಲುದ್ದೀನ್ 
ತಾಲ್ಲೂಕು ಕಾರ್ಯದರ್ಶಿ,
ರಾಜೇಗೌಡ ,ಮಡಿಕೇರಿ ವಿಧಾನಸಭಾ ಕ್ಷೇತ್ರದ ಗೌರವಾಧ್ಯಕ್ಷರು, ಮೀನಾಕ್ಷಿ 
ತಾಲ್ಲೂಕು ಸಲಹೆಗಾರರು, ವೆಂಕಟೇಶ್ ಡಿ.ವಿ.ತಾಲ್ಲೂಕು ಸಹ ಕಾರ್ಯದರ್ಶಿ,ಕಾರ್ತಿಕ್ 
ಸಲಹೆಗಾರ,ಸುಂದರೇಶ್, ಗಣಪತಿ,ರಮೇಶ್ ಅವರ್ತಿ. ಮುಂತಾದವರು ಪಾಲ್ಗೊಂಡಿದ್ದರು.

ವರದಿ:  ಪ್ರಿತುನ್ ಪೂವಣ್ಣ