ವಾಟ್ಸ್ಆ್ಯಪ್ ನಲ್ಲಿ KSRTC ಟಿಕೆಟ್ ಬುಕಿಂಗ್ ಆರಂಭ:ಮೆಸೇಜ್ ಮಾಡಿದ್ರೆ ಸಾಕು, ಟಿಕೆಟ್ ನಿಮ್ಮ ಮೊಬೈಲ್ ನಲ್ಲೇ!
admincoorgdaily

ಬೆಂಗಳೂರು(ಕೂರ್ಗ್ ಡೈಲಿ):ಬಸ್ ಟಿಕೆಟ್ ಬುಕ್ ಮಾಡಲು ಇನ್ನು ಮುಂದೆ ಬಸ್ ನಿಲ್ದಾಣಕ್ಕೆ ಹೋಗಿ ಕ್ಯೂ ನಿಲ್ಲುವ ಅಗತ್ಯವಿಲ್ಲ, ಏಜೆಂಟ್ ಮೊರೆ ಹೋಗುವಂತಿಲ್ಲ. ನಿಮ್ಮ ವಾಟ್ಸ್ಆ್ಯಪ್ ನಲ್ಲೇ KSRTC ಬಸ್ ಟಿಕೆಟ್ ಬುಕ್ ಮಾಡಬಹುದು. ಈ ಹೊಸ ಸೌಲಭ್ಯವನ್ನು ನಾಲ್ಕು ಸಾರಿಗೆ ನಿಗಮಗಳ ಸೇವೆಯನ್ನು ಒಳಗೊಂಡ ಒನ್ ಕರ್ನಾಟಕ ಮೊಬಿಲಿಟಿ' ಆ್ಯಪ್ ಬಿಡುಗಡೆ ವೇಳೆ ಪ್ರಕಟಿಸಲಾಗಿದೆ.
ರಾಜ್ಯದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿಯ ಎಲ್ಲಾ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ತರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಹೇಗೆ ಬುಕ್ ಮಾಡುವುದು?
*1.* ನಿಮ್ಮ ಮೊಬೈಲ್ ನಲ್ಲಿ *6364940880* ನಂಬರ್ ಸೇವ್ ಮಾಡಿ ವಾಟ್ಸ್ಆ್ಯಪ್ ನಲ್ಲಿ Hi ಎಂದು ಮೆಸೇಜ್ ಮಾಡಿ.
*2.* ಎಲ್ಲಿಂದ ಎಲ್ಲಿಗೆ ಪ್ರಯಾಣ, ದಿನಾಂಕ ನಮೂದಿಸಿ.
*3.* ಲಭ್ಯವಿರುವ ಬಸ್‌ಗಳ ಪಟ್ಟಿ ಬರುತ್ತದೆ, ಸೂಕ್ತ ಬಸ್ ಆಯ್ಕೆ ಮಾಡಿ.
*4.* UPI, ಕ್ರೆಡಿಟ್/ಡೆಬಿಟ್ ಕಾರ್ಡ್, ವಾಲೆಟ್ ಮೂಲಕ ಹಣ ಪಾವತಿಸಿ.
*5.* ಕೂಡಲೇ ಇ-ಟಿಕೆಟ್ ನಿಮ್ಮ ವಾಟ್ಸ್ಆ್ಯಪ್ ಮತ್ತು ಇ-ಮೇಲ್ ಗೆ ಬರುತ್ತದೆ.
ಟಿಕೆಟ್ ಕ್ಯಾನ್ಸಲ್ ಮಾಡುವುದೂ ಇದೇ ವಾಟ್ಸ್ಆ್ಯಪ್ ನಲ್ಲೇ ಸಾಧ್ಯ. PNR, ಮೊಬೈಲ್ ನಂಬರ್ ಮತ್ತು ಪಾಸ್‌ವರ್ಡ್ ಹಾಕಿದರೆ ಟಿಕೆಟ್ ರದ್ದಾಗುತ್ತದೆ.
ಇನ್ನಷ್ಟು ಸೌಲಭ್ಯಗಳು: ಈ ಆ್ಯಪ್ ಮೂಲಕ ಸುರಕ್ಷಿತ ಲಾಗಿನ್, ಹಳೆಯ ಬುಕಿಂಗ್ ವಿವರ, ನಾಲ್ಕೂ ನಿಗಮಗಳ ಬಸ್‌ಗಳ ವಿರುದ್ಧದ ದೂರು ದಾಖಲು, ದೂರಿನ ಸ್ಥಿತಿ ಟ್ರ್ಯಾಕಿಂಗ್ ಮಾಡಬಹುದು ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.