Kodagu

ಕುಲಾಲ ಕುಂಬಾರ ಸಮಾಜದ ಚಾಂಪಿಯನ್ಸ್ ಲೀಗ್ ಸೀಸನ್-2: ಮಾಯಮುಡಿಯಲ್ಲಿ ಕ್ರಿಕೆಟ್ ಹಬ್ಬ

admincoorgdaily

ಕುಲಾಲ ಕುಂಬಾರ ಸಮಾಜದ ಚಾಂಪಿಯನ್ಸ್ ಲೀಗ್ ಸೀಸನ್-2: ಮಾಯಮುಡಿಯಲ್ಲಿ ಕ್ರಿಕೆಟ್ ಹಬ್ಬ
ಮಡಿಕೇರಿ: ಕುಲಾಲ ಕುಂಬಾರ ಸಮಾಜವನ್ನು ಕ್ರೀಡಾ ಕಣದಲ್ಲಿ ಒಗ್ಗೂಡಿಸುವ ಪ್ರಯತ್ನವಾಗಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಸೀಸನ್-೨ ಮಾಯಾಮುಡಿಯಲ್ಲಿ ಸಜ್ಜಾಗಿದೆ.

ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ದಾಮೋದರ್ ಮಾಹಿತಿ ನೀಡಿ ಮಾತನಾಡಿ, ಪ್ರಾಥಮಿಕ ಶಾಲಾ ಮೈದಾನದಲ್ಲಿ ಅ.೩೧ ಮತ್ತು ನ.೧ ರಂದು ಎರಡು ದಿನಗಳ ಕಾಲ ಟೂರ್ನಿ ನಡೆಯಲಿದೆ. ಮೊದಲು ನೋಂದಾಯಿಸುವ ೧೦ ತಂಡಗಳಿಗೆ ಅವಕಾಶ ನೀಡಲಾಗಿದ್ದು, ೪ ಓವರ್‌ಗಳ ವೇಗದ ಲೀಗ್ ಮಾದರಿಯ ಪಂದ್ಯಾಟ ಇದಾಗಿದೆ. ಫೈನಲ್ ಗೆದ್ದವರಿಗೆ ಟ್ರೋಫಿ ಜೊತೆಗೆ ನಗದು ಬಹುಮಾನ ಮತ್ತು ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್‌ಗೆ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕ್ರೀಡಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ಅ.೩೧ ಬೆಳಗ್ಗೆ ೮ ಗಂಟೆಗೆ ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರು ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಸಂಸದ ಯದುವೀರ್ ಒಡೆಯರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಸಂಘದ ಅಧ್ಯಕ್ಷ ದಾಮೋದರ್ ಅಧ್ಯಕ್ಷತೆ ವಹಿಸಲಿದ್ದಾರೆ. ನ.೧ ರಂದು ಸಮಾರೋಪಕ್ಕೆ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂತರ್ ಗೌಡ ಆಗಮಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ಕಾಂತಿಮಣಿ, ನಿತೀಶ್, ಗಿರೀಶ್ ಇದ್ದರು.