ಕುಶಾಲನಗರ;ಡಿಜೆ ನೃತ್ಯದ ವೇಳೆ ಬಣ್ಣದ ಹೊಗೆ ಸೇವಿಸಿ 4 ವಿದ್ಯಾರ್ಥಿನಿಯರು ಅಸ್ವಸ್ಥ
admincoorgdaily

ಕುಶಾಲನಗರ: ರೆಸಾರ್ಟ್ ಒಂದರಲ್ಲಿ ಡಿಜೆ ನೃತ್ಯದ ವೇಳೆ ಬಣ್ಣ ಬಣ್ಣದ ಹೊಗೆ ಸೇವಿಸಿ ಪ್ರವಾಸಿ ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ಕುಶಾಲನಗರ ಸಮೀಪದ ಆವರ್ತಿ ಬಳಿ ನಡೆದಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಿಂದ ಮೂರು ಬಸ್ಸುಗಳಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿಯರಲ್ಲಿ ನಾಲ್ಕು ಮಂದಿ ಅಸ್ವಸ್ಥರಾಗಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಡಿಜೆ ನೃತ್ಯದ ವೇಳೆ ಬಿಡುಗಡೆಯಾದ ಬಣ್ಣ ಬಣ್ಣದ ಹೊಗೆಯನ್ನು ಸೇವಿಸಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.