Kodagu

ಕುಶಾಲನಗರ;ಕಳವು ಆರೋಪದಿಂದ ಮನನೊಂದು ಯುವಕ ಆತ್ಮಹತ್ಯೆ

admincoorgdaily

ಕುಶಾಲನಗರ;ಕಳವು ಆರೋಪದಿಂದ ಮನನೊಂದು ಯುವಕ ಆತ್ಮಹತ್ಯೆ
ಕುಶಾಲನಗರ, ಸೆ.9  ಕುಶಾಲನಗರ ಸಮೀಪದ ಕೂಡ್ಲೂರಿನ ವರ್ಕ್ ಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ ದಿಲೀಪ (27) ಎಂಬ ಮೆಕಾನಿಕ್ ಮೇಲೆ ಕೆಲವು ಸಾಮಗ್ರಿ ಕಳವು ಮಾಡಿರುವ ಆರೋಪ ಬಂದ ಹಿನ್ನೆಲೆಯಲ್ಲಿ ಆತ ಮನನೊಂದು ನೇಣು ಬಿಗಿದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ತನ್ನ ತಾಯಿಗೆ ಕರೆ ಮಾಡಿ‌ ಆರೋಪದಿಂದ ಮನನೊಂದಿರುವ ಬಗ್ಗೆ ತಿಳಿಸಿದ್ದಾರೆ. ಸಂಜೆ ತಾಯಿ ಕೂಡ್ಲೂರಿಗೆ ಬಂದು ನೋಡಿದಾಗ ದಿಲೀಪ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಸಾವಿನ ಬಗ್ಗೆ ಸಂಶಯವಿದ್ದು   ಸೂಕ್ತ ತನಿಖೆ ನಡೆಸಬೇಕೆಂದು ಕೋರಿ ತಾಯಿ ಮೀರಾ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.