ಕುಶಾಲನಗರ;ಮಹಡಿಯಿಂದ ಬಿದ್ದು ಬಾಲಕ ಸಾವು
admincoorgdaily

ಕುಶಾಲನಗರ: ಮನೆಯ ಮಹಡಿಯಿಂದ ಜಾರಿ ಬಿದ್ದು ಬಾಲಕನೊಬ್ಬ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಮಡಿಕೇರಿ ನವೋದಯ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ಸ್ಥಳೀಯ ಗುತ್ತಿಗೆದಾರ ಅರುಣ್ ಎಂಬುವರ ಪುತ್ರ ಚಿರಂತ್ (11) ಮೃತಪಟ್ಟ ದುರ್ದೈವಿ ಬಾಲಕ.
ಘಟನೆಯಿಂದ ತಲೆಗೆ ತೀವ್ರ ಏಟು ಉಂಟಾಗಿ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.