Kodagu

ಕುಶಾಲನಗರ ; 'ಮಧುಮೇಹ ಸ್ನೇಹೀ ಅಕ್ಕಿ ' ಮಳಿಗೆ ಉದ್ಘಾಟನೆ

admincoorgdaily

ಕುಶಾಲನಗರ ; 'ಮಧುಮೇಹ ಸ್ನೇಹೀ ಅಕ್ಕಿ ' ಮಳಿಗೆ ಉದ್ಘಾಟನೆ
ಕುಶಾಲನಗರ, ಅ.4 : ಕುಶಾಲನಗರದ ಗೋಪಾಲ್ ಸರ್ಕಲ್ ಬಳಿ 'ಮಧುಮೇಹ ಸ್ನೇಹಿ ಅಕ್ಕಿ' ಯ ದಾಸ್ತಾನು ಮಳಿಗೆ 'ಲಕ್ಷ್ಮೀದೇವಿ ಟ್ರೇಡರ್ಸ್' ಅನ್ನು  ವೈದ್ಯರಾದ ಡಾ. ಪ್ರಾಣೇಶ್ ಇತ್ತೀಚೆಗೆ ಉದ್ಘಾಟಿಸಿದರು. 

ಸಾಂದರ್ಭಿಕವಾಗಿ ಮಾತನಾಡಿದ ಅವರು, 'ಮಧುಮೇಹ ಸ್ನೇಹೀ ಅಕ್ಕಿ'ಯು ಅತಿ ಕಡಿಮೆ ಗ್ಲೈಮಿಕ್ ಇಂಡೆಕ್ಸ್ ಹೊಂದಿದ್ದು ಸೇವನೆಯ ನಂತರ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಾಮಾನ್ಯ ಅಕ್ಕಿಯ ಹಾಗೆ ಹೆಚ್ಚು ಏರಿಸುವುದಿಲ್ಲ ಎಂದರಲ್ಲದೆ ತೂಕ ನಿರ್ವಹಣೆ ಹಾಗೂ ಹೃದಯಕ್ಕೆ ಆರೋಗ್ಯಕರ ಎಂದು ಹೇಳಿದರು. 

ನಂತರ ಮಾತನಾಡಿದ ಮಾಲೀಕರಾದ ವಿ. ಆರ್. ರಮ್ಯ, ತಾವು ಕೇವಲ ವ್ಯಾಪಾರಿ ಮನೋಭಾವದಿಂದ ಮಾತ್ರ ಅಲ್ಲದೆ ಸಾಮಾಜಿಕ ಕಳಕಳಿಯಿಂದ ಹಾಗೂ ಇತ್ತೀಚೆಗೆ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಕಾಡುತ್ತಿರುವ ಮಧುಮೇಹ ಸಮಸ್ಯೆಗೆ ತುಸು ಮಟ್ಟಿಗೆ ಪರಿಹಾರ ನೀಡುವ ಸಲುವಾಗಿ ಈ ಮಳಿಗೆ ಆರಂಭಿಸಿರುವುದಾಗಿ ಹೇಳಿದರು.

ಈ ಸಂದರ್ಭ ಕ.ರ.ವೇ. (ಸ್ವಾಭಿಮಾನಿ) ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಉಪಾಧ್ಯಕ್ಷ ವಿ. ಎಸ್. ರಾಜಶೇಖರ ಗೌಡ, ಅಕ್ಕಿಯನ್ನು ಸೇವಿಸಿ ಅದರ ಗುಣದ ಬಗ್ಗೆ ಸ್ವಯಂ ಮಾಹಿತಿ ಪಡೆದ ರವಿಕಿರಣ್ ಇನ್ನಿತರರು ಹಾಜರಿದ್ದರು.