ಕುಶಾಲನಗರ : ನಿಯಂತ್ರಣ ತಪ್ಪಿದ ಕೋರೆ ಲಾರಿ, ಜೀವ ಭಯದಿಂದ ಜಿಗಿದ ಚಾಲಕ ದುರ್ಮರಣ
admincoorgdaily

ಕುಶಾಲನಗರ, ನ. 1 : ಕುಶಾಲನಗರ ಸಮೀಪದ ತೊರೆನೂರಿನ ಅರೆಗಲ್ಲು ಕೋರೆಯಲ್ಲಿ ಕಲ್ಲು ತುಂಬಿದ ಲಾರಿ ಚಾಲನೆ ಸಂದರ್ಭ ನಿಯಂತ್ರಣ ತಪ್ಪಿ ಸುಮಾರು 25 ಅಡಿ ಆಳದ ಕಂದಕಕ್ಕೆ ಉರುಳಿದ್ದು ಅದರಲ್ಲಿದ್ದ ಚಾಲಕ ಕುಶಾಲನಗರದ ಟೌನ್ ಕಾಲನಿ ನಿವಾಸಿ ಆರ್ಮುಗಂ ಅವರ ಪುತ್ರ ವಿನ್ಸೆಂಟ್ (35) ಪ್ರಾಣಭಯದಿಂದ ಲಾರಿಯಿಂದ ಜಿಗಿದಿದ್ದು ದುರದೃಷ್ಟವಶಾತ್ ಕಂದಕದಲ್ಲಿದ್ದ ಬಂಡೆ ಕಲ್ಲುಗಳಿಗೆ ತಲೆ ಅಪ್ಪಳಿಸಿ ದುರ್ಮರಣಕ್ಕೆಯಿಡಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.