Kodagu

ಕುಶಾಲನಗರ ಗೌಡ ಮಹಿಳಾ ಒಕ್ಕೂಟ ರಚನೆ;ಅಧ್ಯಕ್ಷರಾಗಿ ಕುಯ್ಯಮುಡಿ ಶ್ರೀವಾಣಿ ಸುರೇಶ್ ಆಯ್ಕೆ

admincoorgdaily

ಕುಶಾಲನಗರ ಗೌಡ ಮಹಿಳಾ ಒಕ್ಕೂಟ ರಚನೆ;ಅಧ್ಯಕ್ಷರಾಗಿ ಕುಯ್ಯಮುಡಿ ಶ್ರೀವಾಣಿ ಸುರೇಶ್ ಆಯ್ಕೆ
 ಕುಶಾಲನಗರ; ಗೌಡ ಮಹಿಳಾ ಒಕ್ಕೂಟವನ್ನು ನೋಂದಾಯಿಸಿ  ನೂತನವಾಗಿ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕುಯ್ಯಮುಡಿ ಶ್ರೀವಾಣಿ ಸುರೇಶ್ ರವರನ್ನು ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಕುದುಪಜೆ ಜ್ಯೋತಿ ಲವಕುಮಾರ್, ಉಪಾಧ್ಯಕ್ಷರಾಗಿ ಕುದುಪಜೆ ಲತಾ ಸುರೇಶ್, ಸಹ ಕಾರ್ಯದರ್ಶಿಯಾಗಿ ಕಲಾ ಆನಂದ ಕರಂದ್ಲಾಜೆ, ಖಜಾಂಜಿಗಳಾಗಿ ಊರೊಳನ ಉಷಾ ಸುರೇಶ್ ಆಯ್ಕೆಯಾಗಿದ್ದಾರೆ.

ಒಕ್ಕೂಟದಲ್ಲಿ 15 ಮಂದಿ ಪದಾಧಿಕಾರಿಗಳು ಹಾಗೂ 350 ಮಹಿಳಾ ಸದಸ್ಯರ ಸೇರ್ಪಡೆಯಾಗಿದ್ದು ,ಇನ್ನಷ್ಟು ಸದಸ್ಯರ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದ್ದು,  10 ಕುಟುಂಬ  18 ಗೋತ್ರದ ಎಲ್ಲಾ ಗೌಡರು ಈ ಮಹಿಳಾ ಒಕ್ಕೂಟದ ಸದಸ್ಯರಾಗಬಹುದು ಎಂದು ಅವರು ತಿಳಿಸಿದ್ದಾರೆ.

ನೂತನ ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದ್ದು ಗೌಡ ಜನಾಂಗದ ಆಚಾರ ವಿಚಾರ , ಪದ್ದತಿ, ಸಂಪ್ರದಾಯ ಮತ್ತು ಜನಾಂಗದ ಆಸ್ಮಿತೆಯನ್ನು ಎತ್ತಿ ಹಿಡಿದು ಸಮುದಾಯದ ಉನ್ನತಿಗೆ  ನೂತನ ಮಹಿಳಾ ಒಕ್ಕೂಟ ಕೆಲಸ ಮಾಡಲಿದೆ.
ಹಾಗೆಯೇ ಕುಶಾಲನಗರ ಗೌಡ ಸಮಾಜ ಮತ್ತು ಕೊಡಗು ಗೌಡ ಸಮಾಜಗಳ ಒಕ್ಕೂಟದ ಬಲವರ್ಧನೆಗೆ ಕೆಲಸ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನೂತನ ಆಡಳಿತ ಮಂಡಳಿ.

ಕುಳಿತಿರುವವರು (ಎಡದಿಂದ ಬಲಕ್ಕೆ): ಉಷಾ ಊರೊಳನ , ಹರಿಣಿ ಮುಕ್ಕಾಟಿ, ಶ್ರೀವಾಣಿ ಕುಯ್ಯಮುಡಿ (ಅಧ್ಯಕ್ಷರು), ಲತಾ ಜಬ್ಬನ, ಭವಾನಿ ನೈಯಣಿ, ಅಶ್ವಿನಿ ಕೂರನ.
 ನಿಂತಿರುವವರು  (ಎಡದಿಂದ ಬಲಕ್ಕೆ):
ನವೀನ ಮುಕ್ಕಾಟಿ, ಅನಿತಾ ನಂಗಾರು, ಲತಾ ಕುದುಪಜೆ ,ರೂಪ ಹಾನಗಲ್,ರಶಿ ಚೆರಿಯಮನೆ, ಜ್ಯೋತಿ ಕುದುಪಜೆ ,ಶುಭ ಹೊಸಮನೆ, ಶೈಲಾ ಕೇಡನ, ಕಲಾ ಕರಂದ್ಲಾಜೆ.