Kodagu

ಕುಶಾಲನಗರ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ - ಓರ್ವ ಮಹಿಳೆ ರಕ್ಷಣೆ, ಕೇರಳ ಮೂಲದ ಆರೋಪಿ ಬಂಧನ

admincoorgdaily

ಕುಶಾಲನಗರ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ - ಓರ್ವ ಮಹಿಳೆ ರಕ್ಷಣೆ, ಕೇರಳ ಮೂಲದ ಆರೋಪಿ ಬಂಧನ

ಕುಶಾಲನಗರ: ಕುಶಾಲನಗರದ ಬೈಪಾಸ್ ರಸ್ತೆಯಲ್ಲಿರುವ ರಾಯಲ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ದಿನಾಂಕ: 27-10-2026 ರಂದು ದಾಳಿ ನಡೆಸಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿರುತ್ತದೆ ಹಾಗೂ ಸದರಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇರಳ ರಾಜ್ಯ ಮೂಲದ ಆರೋಪಿ ನಿಜೇಶ್.ಕೆ ಎಂಬಾತನ ಮೇಲೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊ.ಸಂ: 138/2026, ಕಲಂ: 3, 4 & 5 The Immoral Traffic (Prevention) Act-1956 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಲಾಗಿರುತ್ತದೆ.