ಕುಶಾಲನಗರ; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರಿಗೆ ತಲಾ 20 ವರ್ಷ ಜೈಲು ಶಿಕ್ಷೆ
admincoorgdaily

ನ್ಯಾಯಾಧೀಶೆ ಶ್ರೀಮತಿ ಮಮತಾ ಅವರು ಸ್ಪೆಷಲ್ ಕೇಸ್ ನಂ.46/2024 ರಲ್ಲಿ ಈ ತೀರ್ಪು ನೀಡಿದ್ದಾರೆ. 1ನೇ ಆರೋಪಿ ದಿಲೀಪ್ ಕುಮಾರ್ ಬಿ.ಬಿ.ಗೆ 20 ವರ್ಷ ಜೈಲು ಮತ್ತು 1,60,000 ರೂ. ದಂಡ, 2ನೇ ಆರೋಪಿ ಲಾಡ್ಜ್ ಮಾಲೀಕ ಚಂದ್ರಪ್ಪಗೆ 20 ವರ್ಷ ಜೈಲು ಮತ್ತು 25,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಸುಂಟಿಕೊಪ್ಪ ಸಮೀಪ ಗ್ರಾಮದ 16 ವರ್ಷದ ಬಾಲಕಿ ಕುಶಾಲನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ದಿಲೀಪ್ ಕುಮಾರ್ ಪ್ರೀತಿಸುವುದಾಗಿ ನಂಬಿಸಿ ಬಾಲಕಿಯನ್ನು ವಿವಿಧ ಲಾಡ್ಜ್‌ಗಳಿಗೆ ಕರೆದೊಯ್ದು 10ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದ. 2024ರ ಫೆ.10ರಂದು ಕೂಡಿಗೆ ಗ್ರಾಮದ ದೇವಸ್ಥಾನದಲ್ಲಿ ಬಲವಂತವಾಗಿ ತಾಳಿ ಕಟ್ಟಿ ಬಾಲ್ಯ ವಿವಾಹ ಮಾಡಿಕೊಂಡಿದ್ದ. ಮಾ.9ರಂದು ರಾತ್ರಿ ಬಾಲಕಿಯನ್ನು ಅಪಹರಿಸಿ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸರು ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ದೋಷಾರೋಪಣೆ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ದೇವೇಂದ್ರ ಎನ್.ಪಿ. ವಾದ ಮಂಡಿಸಿದ್ದರು.