Kodagu

ನೆಲ್ಲಿಹುದಿಕೇರಿಯಲ್ಲಿ‌‌ ಕುಶಾಲನಗರ ‌ ತಾಲೂಕು ಮಟ್ಟದ ಪಿಯು ಚೆಸ್ ಪಂದ್ಯಾಟಕ್ಕೆ ಚಾಲನೆ

admincoorgdaily

ನೆಲ್ಲಿಹುದಿಕೇರಿಯಲ್ಲಿ‌‌ ಕುಶಾಲನಗರ ‌ ತಾಲೂಕು ಮಟ್ಟದ ಪಿಯು ಚೆಸ್ ಪಂದ್ಯಾಟಕ್ಕೆ ಚಾಲನೆ
ನೆಲ್ಯಹುದಿಕೇರಿ; ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನ ಕುಶಾಲನಗರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಚೆಸ್ ಪಂದ್ಯಾಟ ಶನಿವಾರ ನಡೆಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮುಸ್ತಫಾ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಪ್ರಾಂಶುಪಾಲ ಅಂಥೋನಿ ವಿವಿಯನ್ ಅಲ್ವಾರಿಸ್ ಕ್ರೀಡಾಪಟುಗಳಿಗೆ ಶುಭ ಕೋರಿದರು. ಸೆಂಟ್ ಮೇರಿಸ್ ಶಾಲೆಯ ದೈಹಿಕ ಶಿಕ್ಷಕ ಚಂದ್ರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಕೆಪಿಎಸ್ ಶಾಲಾ ಮುಖ್ಯ ಶಿಕ್ಷಕ ಅನಿಲ್ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು ಇದ್ದರು. ಧನಂಜಯ ಕುಮಾರ್ ಎಸ್.ಎಂ ನಿರೂಪಿಸಿದರು. ಭಾಗ್ಯಜ್ಯೋತಿ ಸ್ವಾಗತಿಸಿ, ನಳಂದ ವಂದಿಸಿದರು.

ಫಲಿತಾಂಶ - ಬಾಲಕರ ವಿಭಾಗ:

1. ಅಜಯ್ ಆರ್ - ಕೂಡಿಗೆ ಸ.ಪ.ಪೂ. ಕಾಲೇಜು
2. ಆದಿಶೇಷ - ಸುಂಟಿಕೊಪ್ಪ ಸೆಂಟ್ ಮೇರಿಸ್
3. ನೂತನ್ ಗೌಡ - ಕೂಡಿಗೆ ಸ.ಪ.ಪೂ.
4. ಮೊಹಮ್ಮದ್ ಉವೈಸ್ - ನೆಲ್ಯಹುದಿಕೇರಿ
5. ಗೋಪಿನಾಥ್ - ನೆಲ್ಯಹುದಿಕೇರಿ

ಬಾಲಕಿಯರ ವಿಭಾಗ*ದಲ್ಲಿ ನೆಲ್ಯಹುದಿಕೇರಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ, ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.