ಕುಶಾಲನಗರ;ನಂಬಿಕೆಗೆ ಕೊಡಲಿ ಪೆಟ್ಟು - 77ರ ಅಜ್ಜಿಯನ್ನು ಕೊಂದು ಹಣ, ಚಿನ್ನ ದೋಚಿದ ನಂಬಿಕಸ್ಥ ಆಟೋ ಚಾಲಕ!
admincoorgdaily

ಕುಶಾಲನಗರ;ವೃದ್ದೆಯನ್ನು ಕೊಂದು ಆಕೆಯ ಬಳಿಯಿದ್ದ ಹಣ ಮತ್ತು ಚಿನ್ನ ದೋಚಿದ ಪ್ರಕರಣ ನಡೆದಿದೆ.
ಕೂಡಿಗೆಯ ಪೂರ್ಣಚಂದ್ರ ಬಡಾವಣೆ ನಿವಾಸಿ ರತ್ನ (77) ಮೃತ ಮಹಿಳೆ.
ಈಕೆಯ ಪರಿಚಿತ ಆಟೋ ಚಾಲಕ ಕೂಡಿಗೆಯ ಕುಮಾರ ಮತ್ತು ಆತನ ಸಹಚರರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅತ್ಯಂತ ನಂಬಿಕಸ್ತನಾಗಿದ್ದ ಆಟೋ ಚಾಲಕ ವೃದ್ದೆಯ ಲೇವಾದೇವಿ ವ್ಯವಹಾರದ ಬಗ್ಗೆ ಚೆನ್ನಾಗಿ ಅರಿತಿದ್ದ. ಬೇರೊಬ್ಬರಿಗೆ ಹಣ ಕೊಡಿಸುವ ನೆಪದಲ್ಲಿ ಆಟೋದಲ್ಲಿ ಕರೆದೊಯ್ದು ಟಿಬೆಟ್ ಕ್ಯಾಂಪ್ ನಲ್ಲಿ ಹತ್ಯೆ ಮಾಡಲಾಗಿದೆ.
ಶನಿವಾರದಿಂದ ಕಾಣೆಯಾಗಿದ್ದ ವೃದ್ದೆಯ ಮೃತದೇಹ ಬೈಲುಕೊಪ್ಪ-ಟಿಬೇಟ್ ಕ್ಯಾಂಪ್ ನಲ್ಲಿ ನಡೆಯುತ್ತಿರುವ ನೂತನ ಹೆದ್ದಾರಿ ಬದಿಯ ಜೋಳದ ಹೊಲದಲ್ಲಿ ಸೋಮವಾರ ಪತ್ತೆಯಾಗಿದೆ. ಈಗಾಗಲೆ ಆರೋಪಿಯನ್ನು ಪೊಲೀಸರು ಬಂಧಿಸಿ ಇತರರ ಪಾತ್ರದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಮೃತ ಮಹಿಳೆ ಮಗಳ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹೊರತೆ ತೆರಳಲು ಆಟೋ ಚಾಲಕನನ್ನು ಹೆಚ್ಚು ಅವಲಂಬಿತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕ ಮಹಿಳೆ ಬಳಿ ಹಣ, ಚಿನ್ನ ದೋಚುವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ.