ಕುಶಾಲನಗರ;ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು
admincoorgdaily

ಕುಶಾಲನಗರ; ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕೆ ನೀರಿನಲ್ಲಿಳಿದ ಯುವ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.7ನೇ ಹೊಸಕೋಟೆ ಗ್ರಾಮದ ಯುವಕ ರಮೀಝ್ (21)ಮೃತಪಟ್ಟ ಯುವಕ.
ಸ್ನೇಹಿತರೊಂದಿಗೆ ಹಾರಂಗಿ ಹಿನ್ನೀರಿನ ಭಾಗಕ್ಕೆ ತೆರಳಿದ ರಮೀಝ್ ಸ್ನಾನ ಮಾಡಲು ನೀರಿನಲ್ಲಿ ಇಳಿದಾಗ ಘಟನೆ ನಡೆದಿದೆ.ಯುವಕನ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ.ಇದೀಗ ಯುವಕನ ಮೃತದೇಶ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಶೋಧಕಾರ್ಯ ನಡೆಯಲಿದೆ.
ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು,ಅಪ್ಡೇಟ್ ಮಾಡಲಾಗುವುದು.