ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ -ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದಿಂದ ಸ್ವಚ್ಛತಾ ಕಾರ್ಯಕ್ರಮ
admincoorgdaily

ನಾಪೋಕ್ಲು :ನಾಪೋಕ್ಲು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ದೇಶದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಜಿ ಯವರ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛತಾ ಶ್ರಮಧಾನ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.
ನಾಪೋಕ್ಲುವಿನ ಹಳೇ ತಾಲೂಕಿನಲ್ಲಿರುವ ಶ್ರೀ ಭಗವತಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಶ್ರಮಾಧಾನ ನಡೆಸಿ, ಬಳಿಕ ಗಿಡ ನೆಡುವ ಮೂಲಕ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಬಿಜೆಪಿ ಶಕ್ತಿಕೇಂದ್ರದ ಸಂಚಾಲಕರಾದ ಶಿವಚಾಳಿಯಂಡ ಅಂಬಿ ಕಾರ್ಯಾಪ್ಪ, ಸಹ ಸಂಚಾಲಕರಾದ ಪಟ್ರಪಂಡ ನಿರುಕಾರ್ಯಪ್ಪ,ಕೊಡಗು ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಚಾಳಿಯಂಡ ಜಗದೀಶ್, ಮಡಿಕೇರಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಪಾಡಿಯಮ್ಮoಡ ಮನುಮಹೇಶ್, ಗ್ರಾಮಾಂತರ ಮಂಡಲ ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ಬಿ. ಎಂ.ಪ್ರದೀಪ್,ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರಾದ ಉಮಾಪ್ರಭು, ಬೂತ್ ಅಧ್ಯಕ್ಷರಾದ ಚಿಯಕಪೂವಂಡ ಸತೀಶ್ ದೇವಯ್ಯ, ಬಿದ್ದಾಟoಡ ಸಂಪತ್, ಕನ್ನಂಭೀರ ಸುಧಿ ತಿಮ್ಮಯ್ಯ,ಪಾಕ್ಸ್ ನಿರ್ದೇಶರಾದ ಕುಂಡಿಯೋಳಂಡ ವಿಶು ಪೂವಯ್ಯ, ಶಿವಚಾಳಿಯಂಡ ದೀಪು, ವಿಲ್ಮ, ಕಂಗಾಂಡ ಜಾಲಿಪೂವಪ್ಪ , ನಾಟೋಳಂಡ ಕಸ್ತೂರಿ, ಸಚಿನ್,ಹಾಗೂ ಮತ್ತಿತರರು ಹಾಜರಿದ್ದರು.