Kodagu

ಮಾದಾಪುರದ ಪ್ರೌಢಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ

admincoorgdaily

ಮಾದಾಪುರದ ಪ್ರೌಢಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ
ಸೋಮವಾರಪೇಟೆ, : 
ನಾಳೆಯ ಉತ್ತಮ ಭವಿಷ್ಯಕ್ಕಾಗಿ
 ನಾವು ಸ್ವಚ್ಛ, ಹಸಿರು  ಸುಂದರ ಪರಿಸರವನ್ನು ಸಂರಕ್ಷಿಸುವುದು
ನಮ್ಮೆಲ್ಲರ ಆದ್ಯ ಕರ್ತವ್ಯ
ವಾಗಿದೆ ಎಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರೂ ಆದ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು.

    ತಾಲ್ಲೂಕಿನ ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ 
 ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ಕಾಲ ಹಮ್ಮಿಕೊಂಡಿರುವ  
ವಾರ್ಷಿಕ ವಿಶೇಷ ಶಿಬಿರದಲ್ಲಿ 
"ಪರಿಸರ ಸಂರಕ್ಷಣೆ  ಮತ್ತು ಮಾಲಿನ್ಯ ತಡೆಗಟ್ಟು
ವುದು"  ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ನಾವು ಮುಂದಿನ ಪೀಳಿಗೆಗಾಗಿ ಮಾಲಿನ್ಯ ತಡೆಗಟ್ಟಿ  ಶುದ್ಧ ಹಾಗೂ ಸುರಕ್ಷಿತ ವಾತಾವರಣವನ್ನು ಒದಗಿಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.

   ಮನುಷ್ಯನು ಇಂದು ತನ್ನ ಆಸೆ ಮತ್ತು ಪ್ರಗತಿಗಾಗಿ ಪರಿಸರದ ಮೇಲೆ ಹಸ್ತಕ್ಷೇಪ ಮಾಡುತ್ತಿರು
ವುದರಿಂದ ಪ್ಪರಿಸರ ಕಲುಷಿತಗೊಳ್ಳುತ್ತಿದೆ.
ನಾವು ಪರಿಸರ ಮತ್ತು ಭೂಮಿಯ ಮೇಲಿನ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು  ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಪ್ರಕೃತಿಯು ನಮಗೆ ಅನಿವಾರ್ಯತೆ, ಅದು ನಮ್ಮ ಆಸ್ತಿಯಲ್ಲ." ಪ್ರಕೃತಿಯನ್ನು ನಾವು ರಕ್ಷಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸಂರಕ್ಷಣೆಗಾಗಿ ಸಣ್ಣ ಸಣ್ಣ ಹೆಜ್ಜೆಯಿಟ್ಟರೆ ನಾವು ದೊಡ್ಡ ಬದಲಾವಣೆಯನ್ನು ತರಲು ಸಾಧ್ಯ ಎಂದರು. 

   ನಾವು ನಮ್ಮ ದಿನನಿತ್ಯ ಮಾಲಿನ್ಯಕಾರಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆ, ಕಾಗದ ಅಥವಾ ಸೆಣಬಿನ ಕೈ ಚೀಲಗಳನ್ನು ಬಳಸುವ ಮೂಲಕ ಮಾಲಿನ್ಯ ತಡೆಗಟ್ಟಲು ಸಂಘಟಿತ ಪ್ರಯತ್ನ ಮಾಡುವುದು ಅಗತ್ಯ.

ಪ್ಲಾಸ್ಟಿಕ್ ನಿಷೇಧ:  ಏಕ-ಬಳಕೆಯ  ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕೈಬಿಟ್ಟು  ನಾವು 3 R ತತ್ವದ ಬಳಕೆಯ ಕ್ರಮಗಳಾದ ಕಡಿಮೆ ಬಳಸುವುದು, (Reduce), ಮರುಬಳಕೆ ಮಾಡುವುದು (Re use) ಮತ್ತು ಪುನಶ್ಚೇತನಗೊಳಿಸುವ  ಮೂಲಕ ಮಾಲಿನ್ಯ ತಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.

   ವಾಯು ಮಾಲಿನ್ಯ,  ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ಪರಿಸರದ ಮೇಲಾಗುತ್ತಿರುವ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ನಾವು ಜನಜಾಗೃತಿ ಮೂಡಿಸಬೇಕು.
ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಯು ನೆಮ್ಮದಿಯಿಂದ ಬದುಕಲು ಸಾಧ್ಯ.
ಎಂದರು.

  ನಾವು ಅರಣ್ಯನಾಶವನ್ನು ತಡೆಗಟ್ಟಿ ಹೆಚ್ಚು ಹೆಚ್ಚು ಸಸ್ಯಗಳನ್ನು ನೆಟ್ಟು ಬೆಳೆಸುವ ಮೂಲಕ 
ಅರಣ್ಯ ಮತ್ತು ಪರಿಸರ ರಕ್ಷಣೆಗೆ
ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರೇಮಕುಮಾರ್ 
ಹೇಳಿದರು.

   ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಭರತ್ ಕುಮಾರ್ ಮಾತನಾಡಿ,
ಮಾನವನ ಚಟುವಟಿಕೆಗಳಿಂದ ಪ್ರಕೃತಿ ಹಾಗೂ ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

   ಶಿಬಿರಾಧಿಕಾರಿ ಎನ್.ಎನ್.ಮನೋಹರ್ ಮಾತನಾಡಿ, ವಿದ್ಯಾರ್ಥಿಗಳು
ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದರು.

 ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎ.ನಾಚಪ್ಪ ಅಧ್ಯಕ್ಷತೆ ವಹಿಸಿದ್ದರು.
  ಉಪನ್ಯಾಸಕಿ ಕು.ಪ್ರಫುಲ್ಲ, ಶಾಲಾ ಶಿಕ್ಷಕರಾದ  ಪಿ.ಜೆ.ಗ್ರೇಸಿ, ಬಿ.ಎಸ್.ಅನಿತ, ಕೆ.ಭವಾನಿ,
ಅನ್ವರ್ ಪಾಷ,
ಸಬೀನ , ನೇತ್ರಾವತಿ , ಸಿಬ್ಬಂದಿ ಬಿ.ಎ.ಕಮಲ ಇತರರು ಇದ್ದರು.
 ಇದಕ್ಕೂ ಮುನ್ನ ಪರಿಸರ ಸಂರಕ್ಷಣೆ ಕುರಿತ ಭಿತ್ತಿಫಲಕಗಳನ್ನು‌ ಹಿಡಿದು ಪರಿಸರ ಜಾಗೃತಿ ಮೂಡಿಸಿದರು.