ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ
admincoorgdaily

ಮಡಿಕೇರಿ;ಚೆಂಬು ಗ್ರಾಮದ ಬಿಜೆಪಿ ಕಾರ್ಯಕರ್ತರು ಮತ್ತು ಪ್ರಮುಖರು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಬಿಜೆಪಿಯ ಪ್ರಮುಖ ನಾಯಕ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ನಂಬಿಯಾರ್, ನಾಯರಗದ್ದೆ ಲೋಲಾಕ್ಷ, ಕೂಗಲೆ ಗೋಪಾಲಕೃಷ್ಣ ಹಾಗೂ ನಿವೃತ್ತ ಅರಣ್ಯ ಅಧಿಕಾರಿ ಬಾಲೆಂಬಿ ರಾಮಚಂದ್ರ ರವರು ಮಾನ್ಯ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ ಅವರ ಜನಪರ ಕಾಳಜಿ, ಅಭಿವೃದ್ಧಿ ಕೆಲಸಗಳು ಹಾಗೂ ಸಾಮಾಜಿಕ ಚಿಂತನೆಯನ್ನು ಮೆಚ್ಚಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಎಲ್ಲರನ್ನು ಮಾನ್ಯ ಶಾಸಕರು ಪಕ್ಷದ ಶಲ್ಯ ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು ಶುಭ ಕೋರಿದರು.
ಶಾಸಕರ ವಿರಾಜಪೇಟೆಯ ಗೃಹ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶೌಕತ್ ಅಲಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹನೀಫ್, ನಿಕಟಪೂರ್ವ ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್, ಹಿರಿಯ ನಾಯಕರಾದ ಸೋಮಣ್ಣ ಬಾಲಂಬಿ, ಬೂತ್ ಅಧ್ಯಕ್ಷರುಗಳಾದ ಚನ್ನಪ್ಪ ನಡುಬೆಟ್ಟು, ಪಕೀರ ಮಂಗಳಪಾರೆ, ನವೀನ ರಾಮಕಜ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೇ ಶಶಿಕಲಾ ಕಟ್ಟೆಪಾರೆ, ನಪೋಕ್ಲು ಬ್ಲಾಕ್ ಸಮಿತಿ ಪದಾಧಿಕಾರಿ ಭುವನೇಶ್ವರ ಕೊಪ್ಪದ, ಯುವ ಕಾಂಗ್ರೆಸ್ಸಿನ ಜಯಪ್ರಕಾಶ್ ಪನ್ನೇಡ್ಕ, ರೋಹಿತ್ ಪನೇಡ್ಕ, ರಶೀದ್ ಬಾಲಂಬಿ ಚೆನಿಯಪ್ಪ ಕಟ್ಟೆಪಾರೆ, ಪುರುಷೋತ್ತಮ ಕಟ್ಟೆಪ್ಪಾರೆ, ರಘುನಾಥ್ ಬಾಲಂಬಿ, ಶಿವರಾಮ ಕೊಪ್ಪದ, ಪೆತ್ತಾಜೆ ಸೂರ್ಯ ಮತ್ತು ವಲಯ ಪ್ರಮುಖರು ಉಪಸ್ಥಿತರಿದ್ದರು.