ಕೂಡಿಗೆ, ಕೂಡುಮಗಳೂರು ಶಾಲಾ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ
admincoorgdaily

ಕುಶಾಲನಗರ:ಮಕ್ಕಳ ವಿಶೇಷ ಪೊಲೀಸ್ ಘಟಕ (SPCU), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಕುಶಾಲನಗರ ಬಳಿಯ ಕೂಡಿಗೆ ಅಂಜೆಲ ಪ್ರೌಢಶಾಲೆ ಮತ್ತು ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ POCSO ಕಾಯ್ದೆ, ಬಾಲ್ಯ ವಿವಾಹ, ಸೈಬರ್ ಕ್ರೈಂ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜೊತೆಗೆ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆಗಳಾದ 1098 (ಮಕ್ಕಳ ಸಹಾಯವಾಣಿ), 112 (ತುರ್ತು ಸಹಾಯವಾಣಿ), 1930 (ಸೈಬರ್ ಕ್ರೈಂ), 181 (ಮಹಿಳಾ ಸಹಾಯವಾಣಿ) ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.