Kodagu

ಗ್ರಂಥಾಲಯ ಮೇಲ್ವಿಚಾರಕಿ ಗಿರಿಜಾ ಪಿ.ಗೆ ರಾಜ್ಯಮಟ್ಟದ ‘ಪರಿಸರ ಅರಿವು ತಾರೆ’ ಪುರಸ್ಕಾರ

admincoorgdaily

ಗ್ರಂಥಾಲಯ ಮೇಲ್ವಿಚಾರಕಿ ಗಿರಿಜಾ ಪಿ.ಗೆ ರಾಜ್ಯಮಟ್ಟದ ‘ಪರಿಸರ ಅರಿವು ತಾರೆ’ ಪುರಸ್ಕಾರ
ಸಿದ್ದಾಪುರ:ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಂಗೂರು-ಚೇರಂಬಾಣೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕಿ ಗಿರಿಜಾ ಪಿ. ರವರಿಗೆ ರಾಜ್ಯಮಟ್ಟದ ‘ಪರಿಸರ ಅರಿವು ತಾರೆ’ ಪುರಸ್ಕಾರ ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮತ್ತು ಅರ್ಲಿ ಬರ್ಡ್ ನೇಚರ್ ಕನ್ಸರ್ವೇಷನ್ ಟ್ರಸ್ಟ್‌ನ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಉಮಾ ಮಹಾದೇವನ್ ದಾಸ್ ಗುಪ್ತ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಗ್ರಾಮೀಣ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೂಲಕ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ, ಪಕ್ಷಿ ವೀಕ್ಷಣೆ ಹಾಗೂ ಪರಿಸರ ಜಾಗೃತಿ ಮೂಡಿಸುವ ವಿಶಿಷ್ಟ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ. ಪಕ್ಷಿ ವೀಕ್ಷಣೆಗಾಗಿ ಬೈನಾಕ್ಯುಲರ್ ಹಾಗೂ ಪುಸ್ತಕಗಳನ್ನು ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅರ್ಲಿ ಬರ್ಡ್ ತಂಡದ ಅಭಿಷೇಕ್, ದೀಪ್ತಿ, ತನ್ಮಯಿ, ಅರವಿಂದ ಕುಡ್ಲ ಮತ್ತಿತರರು ಉಪಸ್ಥಿತರಿದ್ದರು.