Kodagu

ಪೊನ್ನಂಪೇಟೆಯಲ್ಲಿ ಕೊಡವ ಕುಟುಂಬಗಳ ಕ್ರಿಕೆಟ್ ಪಂದ್ಯಾಟದ ಲೋಗೋ ಬಿಡುಗಡೆ

admincoorgdaily

ಪೊನ್ನಂಪೇಟೆಯಲ್ಲಿ ಕೊಡವ ಕುಟುಂಬಗಳ ಕ್ರಿಕೆಟ್ ಪಂದ್ಯಾಟದ ಲೋಗೋ ಬಿಡುಗಡೆ
ಪೊನ್ನಂಪೇಟೆ;ಕೊಡವ ಸಮಾಜದಲ್ಲಿ ಇಂದು ಕೊಟ್ಟಂಗಡ ಕುಟುಂಬಸ್ಥರು ಆಯೋಜಿಸುತ್ತಿರುವ ಕೊಡವ ಕುಟುಂಬಗಳ ಕ್ರಿಕೆಟ್ ಪಂದ್ಯಾಟದ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಭಾಗವಹಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಾಂಡ ಕರ್ಸನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಕೊಟ್ಟಂಗಡ ಕುಟುಂಬದ ಅಧ್ಯಕ್ಷ ಬಿ.ಮುದ್ದಪ್ಪ ಸೇರಿದಂತೆ ಕುಟುಂಬದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.