Kodagu

ಒಂಟಿ ಸಲಗದ ದಾಳಿ: ಕೂಲಿ ಕಾರ್ಮಿಕ ಗಂಭೀರ

admincoorgdaily

ಒಂಟಿ ಸಲಗದ ದಾಳಿ: ಕೂಲಿ ಕಾರ್ಮಿಕ ಗಂಭೀರ
ಅಮ್ಮತ್ತಿ: ಅಮ್ಮತ್ತಿ ಸಮೀಪದ ಒಂಟಿ ಅಂಗಡಿಯ ಚಾಮುಂಡಿ ಪೈಸಾರಿ ಬಳಿ ಒಂಟಿ ಸಲಗ ದಾಳಿ ನಡೆಸಿದ್ದು, ಕೂಲಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗಾಯಗೊಂಡ ವ್ಯಕ್ತಿಯನ್ನು 
ಅಭಿ ಎಂದು ಗುರುತಿಸಲಾಗಿದ್ದು, ತೋಟದ ಕೆಲಸಕ್ಕೆ ಆಟೋದಲ್ಲಿ ತೆರಳುತ್ತಿದ್ದಾಗ ಏಕಾಏಕಿ ಕಾಡಿನಿಂದ ಬಂದ ಒಂಟಿ ಸಲಗ ದಾಳಿ ಮಾಡಿದೆ. ಆನೆ ತುಳಿದ ಪರಿಣಾಮ ಆತನ ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದ್ದು, ಕೂಡಲೇ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.