ಕೆಲಸ ಹುಡುಕುತ್ತಿದ್ದೀರಾ? ಮಡಿಕೇರಿಯಲ್ಲಿ ಸೆ.25ರಂದು ಜಾಬ್ ಇಂಟರ್ವ್ಯೂ
admincoorgdaily

ಮಡಿಕೇರಿ:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೆಪ್ಟೆಂಬರ್, 25 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ “ನೇರ ಸಂದರ್ಶನ”ವನ್ನು ಆಯೋಜಿಸಲಾಗಿದೆ. ಈ ನೇರ ಸಂದರ್ಶನದಲ್ಲಿ, “ಪೆಂಟಾಟೆಕ್ ಟೆಕ್ನಿಕಲ್ ಕಂಪ್ಯೂಟರ್ ಸೆಂಟರ್, ಮಡಿಕೇರಿ” ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಈ ನೇರ ಸಂದರ್ಶನದಲ್ಲಿ ಅಕೌಂಟೆಂಟ್ ಕಂಪ್ಯೂಟರ್, ಹಾರ್ಡ್‍ವೇರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಡಿಪ್ಲೋಮಾ, ಐಟಿಐ, ಬಿಎಸ್ಸಿ, ಬಿಸಿಎ., ಬಿಕಾಂ, ಬಿಬಿಎ. ವಿದ್ಯಾರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ವಯೋಮಿತಿ 18 ರಿಂದ 35 ವರ್ಷಗಳು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್– 8296020826 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.