Kodagu

ಉದ್ಯೋಗ ಹುಡುಕುತ್ತಿದ್ದೀರಾ? - ನ.23ಕ್ಕೆ ಮಡಿಕೇರಿಯಲ್ಲಿ ನೇರ ಸಂದರ್ಶನ

admincoorgdaily

ಸಾಂದರ್ಭಿಕ ಚಿತ್ರ

ಮಡಿಕೇರಿ;-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನವೆಂಬರ್, 23 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲ್ಯಾಣಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ನೆಕ್ಸಾ- ಮಡಿಕೇರಿ, ವಾರ್ಡ್ ನಂ. 14, ಬ್ಲಾಕ್ ನಂ.20, 14-1-9-17ಬಿ ದೇಚೂರು, ಮಡಿಕೇರಿ-571201, ಇಲ್ಲಿ “ನೇರ ಸಂದರ್ಶನ”ವನ್ನು ಆಯೋಜಿಸಲಾಗಿದೆ.

ಈ ನೇರ ಸಂದರ್ಶನದಲ್ಲಿ ಕಲ್ಯಾಣಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ನೆಕ್ಸಾ- ಮಡಿಕೇರಿ, ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
      ಈ ನೇರ ಸಂದರ್ಶನದಲ್ಲಿ ರಿಲೇಷನ್‍ಶಿಪ್ ಮ್ಯಾನೇಜರ್, ಎಸ್‍ಆರ್ ರಿಲೇಷನ್‍ಶಿಪ್ ಮ್ಯಾನೆಜರ್, ಇನ್ಸೂರೆನ್ಸ್ ಎಕ್ಸಿಕ್ಯೂಟಿವ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಆಫೀಸ್ ಅಸಿಸ್ಟೆಂಟ್ ಅಂಡ್ ವೈಪಿಂಗ್ ಬಾಯ್ ಡ್ರೈವರ್  ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಎಸ್‍ಎಸ್‍ಎಲ್‍ಸಿ. ಪಿಯುಸಿ, ಪದವಿ, ಡಿಪ್ಲೋಮಾ, ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. 
ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್– 8296020826 ಇವರನ್ನು ಸಂಪರ್ಕಿಸಬಹುದು.