CRIME

ಗಣೇಶ ವಿಸರ್ಜನೆ ವೇಳೆ ಕೀಳುಜಾತಿ ನಿಂದನೆ ; 17ರ ಯುವಕನ ಬರ್ಬರ ಹತ್ಯೆ

admincoorgdaily

ಮೃತ ಯುವಕ
ತುಮಕೂರು, ಸೆ.21:ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆಯಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಮೃತನನ್ನು ಸಿಂಹಾದ್ರಿ (17) ಎಂದು ಗುರುತಿಸಲಾಗಿದೆ. ಮಗನ ಸಾವಿನ ಸುದ್ದಿ ಕೇಳಿ ತಾಯಿ ಅನ್ನಪೂರ್ಣ ಅವರು ಅಸ್ವಸ್ಥಗೊಂಡಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಸರ್ಜನಾ ಕಾರ್ಯಕ್ರಮದ ವೇಳೆ "ನೀನು ಕೀಳು ಜಾತಿಯವನು" ಎಂದು ನಿಂದಿಸಿ, ಕಲ್ಲಿನಿಂದ ಹಲ್ಲೆ ನಡೆಸಿ ನಾಯಕ ಸಮುದಾಯದ ಮಾರುತೇಶ್ (24) ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ತಾಯಿ ಅನ್ನಪೂರ್ಣ ಅವರು, "ಅರ್ಧ ಗಂಟೆ ಮುಂಚೆ ಮಗ ಕರೆ ಮಾಡಿದ್ದ. ಹುಷಾರಿಲ್ಲ ಎಂದಿದ್ದ, ಆಸ್ಪತ್ರೆಗೆ ಹೋಗು ಎಂದಿದ್ದೆ. ಹುಡುಗಿ ವಿಚಾರಕ್ಕೆ ನಾಯಕರ ಹಟ್ಟಿಗೆ ಕರೆಸಿದ್ದಾರೆ ಎಂದ. ಹೋಗಬೇಡ ಎಂದಿದ್ದೆ. ಅದೇ ಕೊನೆಯಾಯ್ತು. ನಿನ್ನೆ 8ರಿಂದ 10 ಜನ ಸೇರಿ 'ನೀನ್ಯಾಕೆ ನಮ್ಮ ಗಣೇಶ ಬಳಿ ಬಂದಿದ್ದೀಯಾ' ಎಂದು ಹಲ್ಲೆ ನಡೆಸಿ ಕೊಂದಿದ್ದಾರೆ. ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ, ಉಳಿದವರ ವಿರುದ್ಧವೂ ಕ್ರಮವಾಗಬೇಕು" ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಅನ್ನಪೂರ್ಣ ಅವರ ದೂರಿನ ಮೇರೆಗೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.