Kodagu

ಕೊಡಗು ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಪ್ರವೇಶಾತಿ ಆರಂಭ

admincoorgdaily

ಕೊಡಗು ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಪ್ರವೇಶಾತಿ ಆರಂಭ
ಮಡಿಕೇರಿ: ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಆರಂಭವಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಮೀರ್ ಅಹಮದ್ ತಿಳಿಸಿದ್ದಾರೆ.

2 ವರ್ಷಗಳ (4 ಸೆಮಿಸ್ಟರ್) ಅವಧಿಯ ಈ ಕೋರ್ಸ್‌ಗೆ ಬಿ.ಎ ಪದವಿಯಲ್ಲಿ ಕನ್ನಡವನ್ನು ಐಚ್ಛಿಕ ಅಥವಾ ಭಾಷಾ ವಿಷಯವಾಗಿ ಅಧ್ಯಯನ ಮಾಡಿದವರು ಅಥವಾ ಯಾವುದೇ ಪದವಿಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿತವರು ಅರ್ಜಿ ಸಲ್ಲಿಸಬಹುದು.

ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿರುವ ಕೊಡಗು ವಿಶ್ವವಿದ್ಯಾಲಯದಲ್ಲಿ ತರಗತಿಗಳು ನಡೆಯಲಿವೆ.

ಪದವಿಯ ಮಹತ್ವ:ಎಂ.ಎ ಕನ್ನಡ ಪದವಿಯು ಅಕಾಡೆಮಿಕ್, ಉದ್ಯೋಗ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಲು, ಪತ್ರಿಕೋದ್ಯಮ, ಅನುವಾದ, ಸಂಪಾದನೆ, ಪ್ರಕಾಶನ, ಸಿನಿಮಾ/ಟಿವಿ ಸ್ಕ್ರಿಪ್ಟ್ ಬರವಣಿಗೆ, ಕಂಟೆಂಟ್ ರೈಟಿಂಗ್, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅಧಿಕಾರಿ ಹುದ್ದೆಗಳಿಗೆ ಈ ಪದವಿ ಅಗತ್ಯ. ನಂತರ NET, PhD ಮಾಡಿ ಸಂಶೋಧನಾ ಕ್ಷೇತ್ರದಲ್ಲೂ ಅವಕಾಶ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಡಾ.ಜಮೀರ್ ಅಹಮದ್ - 9845821071 ಸಂಪರ್ಕಿಸಬಹುದು.