75+ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಮಚ್ಚೇಟ್ಟಿರ ಲಾಲು - ಪುಟ್ಟರಾಜು ಜೋಡಿಗೆ ಪ್ರಶಸ್ತಿ
admincoorgdaily

ಪೊನ್ನಂಪೇಟೆ, ಸೆ.24: ತಿರುನೆಲ್ವೇಲಿಯಲ್ಲಿ ಸೆ.20ರಂದು ನಡೆದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ 75 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ವಿಭಾಗದಲ್ಲಿ ನಿವೃತ್ತ ಸ್ಟೇಟ್ ಬ್ಯಾಂಕ್ ಸಹಾಯಕ ಮುಖ್ಯ ವ್ಯವಸ್ಥಾಪಕ ಮಚ್ಚೇಟ್ಟಿರ ಲಾಲು ಹಾಗೂ ಪುಟ್ಟರಾಜು ಜೋಡಿ ಚಾಂಪಿಯನ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
75 ವರ್ಷ ಮೇಲ್ಪಟ್ಟ ವಯೋಮಾನದ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಲಾಲು–ಪುಟ್ಟರಾಜ್ ಜೋಡಿ, ಪಂದ್ಯದುದ್ದಕ್ಕೂ ಉತ್ತಮ ಸಮನ್ವಯ, ದೈಹಿಕ ಕ್ಷಮತೆ ಹಾಗೂ ಹೋರಾಟದ ಮನೋಭಾವದೊಂದಿಗೆ ಎದುರಾಳಿಗಳನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ತಮ್ಮ ಕ್ರೀಡಾ ಸಾಧನೆಯ ಮೂಲಕ ಸಾಬೀತುಪಡಿಸಿರುವ ಇವರ ಸಾಧನೆ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರೀಡೆಯ ಮೇಲಿನ ಬದ್ಧತೆ, ನಿರಂತರ ಅಭ್ಯಾಸ ಹಾಗೂ ಉತ್ಸಾಹವು ಯುವ ಕ್ರೀಡಾಪಟುಗಳಿಗೂ ಸ್ಫೂರ್ತಿದಾಯಕವಾಗಿದೆ.