ಮದೆ ನಿವಾಸಿಗಳಿಂದ ಶಾಸಕ ಎ.ಎಸ್.ಪೊನ್ನಣ್ಣರವರಿಗೆ ಮನವಿ ಸಲ್ಲಿಕೆ
admincoorgdaily

ಮಡಿಕೇರಿ;ತಾಲೂಕಿನ ಮದೆ ಗ್ರಾಮದ ಸಾಲಪ್ಪು ಭಾಗದ ನಿವಾಸಿಗಳು ತಮ್ಮ ಬಹು ಕಾಲದ ಕೋರಿಕೆಯಾದ ರಸ್ತೆ ದುರಸ್ತಿಯ ಮನವಿಯನ್ನು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ( ಸಂಪುಟ ದರ್ಜೆ)
ಗಳಾದ ಎ.ಎಸ್.ಪೊನ್ನಣ್ಣ ರವರಿಗೆ ಸಲ್ಲಿಸಿದರು.
ಶಾಸಕರ ಗೃಹ ಕಛೇರಿಗೆ ಜಿಲ್ಲಾ ಮುಖಂಡರು ಹಾಗೂ ಕರ್ನಾಟಕ ಅರೆಬಾಷೆ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ
ಕೊಲ್ಯದ ಗಿರೀಶ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರೊಂದಿಗೆ ಮನವಿ ಸಲ್ಲಿಸಿದ ಗ್ರಾಮದ ಮುಖಂಡರು ಸದರಿ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಜನರು ವಾಹನದಲ್ಲಿ ಓಡಾಡುತ್ತಿದ್ದು ರಸ್ತೆ ಅಭಿವೃದ್ಧಿ ಪಡಿಸಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಶಾಸಕ ಪೊನ್ನಣ್ಣ ನವರು ಈ ಬಾರಿ ಮುಖ್ಯಮಂತ್ರಿಗಳು ನೀಡಿರುವ ವಿಶೇಷ ಅನುದಾನದಲ್ಲಿ ಸೇರ್ಪಡೆಗೊಳಿಸಿ ರಸ್ತೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಗ್ರಾಮಸ್ಥರಾದ ಪಳಂಗೋಟು ಜಗದೀಶ್, ಡಾಲು,ಪಾಪುರಾಜ್,ಜಯಪ್ರಕಾಶ್,
ಕುಡಿಯರ ಮನು,ತಳೂರು ನಾಣಯ್ಯ,ತಳೂರು ಜಗದೀಶ್, ಗಾಳಿಕುಂದ ಸತ್ಯೇಶ್ ,ಚೆನ್ನಪ್ಪ ಪೂಜಾರಿ,
ಪಳಂಗೋಟು ವೇಣು ಮತ್ತಿತರರು ಮನವಿ ಸಲ್ಲಿಸುವಾಗ ಉಪಸ್ಥಿತರಿದ್ದರು.