ಮಡಿಕೇರಿ:ಇಂದಿನಿಂದ ಸೆ.18ರ ವರೆಗೆ ಆಧಾರ್ ನೋಂದಣಿ - ತಿದ್ದುಪಡಿ ವಿಶೇಷ ಶಿಬಿರ
admincoorgdaily

ಮಡಿಕೇರಿ: ಮಡಿಕೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ತಾ. 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು, ತಮ್ಮ ಆಧಾರ್ ನೋಂದಣಿ ಹಾಗೂ ಆಧಾರ್ ವಿವರಗಳ ತಿದ್ದುಪಡಿಯನ್ನು ಮಾಡಿಸಿಕೊಳ್ಳುವಂತೆ ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.