Kodagu

ಮಡಿಕೇರಿ ನಗರದ ತ್ಯಾಜ್ಯ ಸಮಸ್ಯೆ:ಬೆಂಗಳೂರಿನಲ್ಲಿ ಮಹತ್ವದ ಸಭೆ

admincoorgdaily

ಮಡಿಕೇರಿ ನಗರದ ತ್ಯಾಜ್ಯ ಸಮಸ್ಯೆ:ಬೆಂಗಳೂರಿನಲ್ಲಿ ಮಹತ್ವದ ಸಭೆ
ಬೆಂಗಳೂರು;ವಿಕಾಸ ಸೌದ ದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮತ್ತು ನಗರ ಅಭಿವೃದ್ಧಿ ಕಾರ್ಯ ದರ್ಶಿ ಬಿ.ಬಿ. ಕಾವೇರಿ ನೇತೃತ್ವದಲ್ಲಿ  ಉನ್ನತ ಮಟ್ಟದ ಸಭೆ ಜರುಗಿತು. 

ಈ ಸಭೆ ಯಲ್ಲಿ ಮಡಿಕೇರಿ ನಗರದ ಕಸದ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಹಾಗೂ ಯು ಜಿ ಡಿ ಮತ್ತು ಅಮೃತ್ - 2 ಕುಡಿಯುವ ನೀರಿನ ಕಾಮಗಾರಿ ಯ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಎಲ್ಲಾ ಕಾಮಗಾರಿ ಮತ್ತು ಯೋಜನೆಯನ್ನು ಪೂರ್ತಿ ಗೊಳಿಸುವಂತೆ  ನಿರ್ಧಾರ ಕೈಗೊಳ್ಳಲಾಯಿತು.

 ಈ ಮಹತ್ವದ ಸಭೆ ಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ,  ಉಪಾಧ್ಯಕ್ಷ  ಮಹೇಶ್ ಜೈನಿ,  ನಗರಸಭಾ ಸದಸ್ಯರು,  ಪೌರಾಯುಕ್ತ ಕೆ. ಎಸ್. ರಮೇಶ್,  ಮತ್ತು  ಸಹಾಯಕ ಕಾರ್ಯ ಪಾಲಕ ಅಭಿಯಂತರರು ಹಾಜರಿದ್ದರು.