Kodagu

ಮಡಿಕೇರಿ ದಸರಾ ಬಜೆಟ್ 2 ಕೋಟಿಗೆ ಏರಿಕೆ, ವೈಭವ ಮಾತ್ರ ಕಡಿಮೆ: ಕೆ.ಎಂ.ಬಿ.ಗಣೇಶ್ ಆರೋಪ

admincoorgdaily

ಮಡಿಕೇರಿ ದಸರಾ ಬಜೆಟ್ 2 ಕೋಟಿಗೆ ಏರಿಕೆ, ವೈಭವ ಮಾತ್ರ ಕಡಿಮೆ: ಕೆ.ಎಂ.ಬಿ.ಗಣೇಶ್ ಆರೋಪ
ಮಡಿಕೇರಿ: ಒಂದು ಕಾಲದಲ್ಲಿ ೨೦-೩೦ ಸಾವಿರದಲ್ಲಿ ನಡೆಯುತ್ತಿದ್ದ ಮಡಿಕೇರಿ ದಸರಾ ಇಂದು ೨ ಕೋಟಿ ಬಜೆಟ್‌ಗೆ ತಲುಪಿದೆ. ಅನುದಾನ ೧೦೦ ಪಟ್ಟು ಹೆಚ್ಚಾಗಿದೆ, ಆದರೆ ವೈಭವ ಹೆಚ್ಚಾಗಿಲ್ಲ ಎಂದು ನಗರ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಬಿ.ಗಣೇಶ್ ಆರೋಪಿಸಿದ್ದಾರೆ.

೨೦೦೩ರಲ್ಲಿ ಎಂ.ಎಂ.ನಾಣಯ್ಯ ೩ ಲಕ್ಷ ತಂದಿದ್ದರು, ನಂತರ ತನ್ವೀರ್ ಸೇಠ್ ೧೦ ಲಕ್ಷ, ಡಾ.ಮಹದೇವಪ್ಪ ೭೫ ಲಕ್ಷ ಕೊಡಿಸಿದ್ದರು. ಆ ನಂತರ ಕೋಟಿ ಗಟ್ಟಲೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ದಸರಾ ವೈಭವ ಕಳೆಗುಂದಿದೆ. ಈ ಬಾರಿ ಲೈಟಿಂಗ್ಸ್ ಅವ್ಯವಸ್ಥೆ, ಗಾಂಧಿ ಮೈದಾನದಲ್ಲಿ ೧೦ ದಿನ ಒಂದೇ ರೀತಿಯ ವೇದಿಕೆ, ಕಾವೇರಿ ಕಲಾಕ್ಷೇತ್ರ ನೆಲಸಮದ ನಡುವೆಯೂ ಟೆಂಡರ್ ಗೊಂದಲ ಕಂಡುಬಂದಿದೆ. 
ಬಜೆಟ್ ಪಾರದರ್ಶಕತೆ ಇಲ್ಲದೆ ಉಪಸಮಿತಿಗಳಿಗೆ ಹಂಚಿಕೆಯಾಗುತ್ತಿಲ್ಲ. ೨೦೨೬ರ ದಸರಾ ಲೆಕ್ಕವನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ನೇರ ಸಂಪರ್ಕ, ಸೆಸ್ಕ್ ಅನುಮತಿ ಇಲ್ಲದೆ ಲೈಟಿಂಗ್ಸ್ ಅಳವಡಿಕೆ ಆರೋಪ ಕೇಳಿಬಂದಿದೆ. ಮಂಟಪಗಳು ಶೋಭಾಯಾತ್ರೆಯಲ್ಲಿ ಒಟ್ಟಿಗೆ ಬರುತ್ತಿಲ್ಲ. ಪರಿಣಾಮ ಹೊರ ಜಿಲ್ಲೆಯ ಜನ ಬಂದರೂ ಕೊಡಗಿನವರೇ ದಸರಾ ನೋಡಲು ಬರುತ್ತಿಲ್ಲ ಎಂದು ಕೆ.ಎಂ.ಬಿ.ಗಣೇಶ್ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣರಾಜ್, ಮೋಹನ್, ಜಗದೀಶ್ ಉಪಸ್ಥಿತರಿದ್ದರು.