Kodagu

ಮಡಿಕೇರಿ ದಸರಾ ಸಂಭ್ರಮ: ರಂಗೋಲಿ, ಗೊಂಬೆ, ಅಲಂಕಾರ ಸ್ಪರ್ಧೆಗಳಿಗೆ ಆಹ್ವಾನ

admincoorgdaily

ಮಡಿಕೇರಿ ದಸರಾ ಸಂಭ್ರಮ: ರಂಗೋಲಿ, ಗೊಂಬೆ, ಅಲಂಕಾರ ಸ್ಪರ್ಧೆಗಳಿಗೆ ಆಹ್ವಾನ
ಮಡಿಕೇರಿ: ನಗರದ ದಸರಾ ಆಚರಣೆಯ ಅಂಗವಾಗಿ ರಂಗೋಲಿ, ಗೊಂಬೆ, ದೇವಾಲಯ, ವಾಹನ ಮತ್ತು ಅಂಗಡಿ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಮಡಿಕೇರಿ ದಸರಾ ಸಮಿತಿ ಮತ್ತು ನಗರ ದಸರಾ ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚಾರ್ ಮನವಿ ಮಾಡಿದರು.

ಅ.೧೧ರ ಶನಿವಾರ ಸಂಜೆ ನಗರದ ಪಂಪಿನ ಕೆರೆಯಿಂದ ೪ ಶಕ್ತಿ ದೇವತೆಗಳ ಕರಗ ನಗರ ಪ್ರದಕ್ಷಿಣೆಗೆ ಬರಲಿದ್ದು, ಪೇಟೆ ರಾಮಮಂದಿರ ರಸ್ತೆಯ ಎರಡೂ ಬದಿಯ ಮನೆಗಳ ಮುಂದೆ ರಂಗೋಲಿ ಹಾಕಿ ಸ್ವಾಗತಿಸಲು ಕೋರಲಾಗಿದೆ. ಎಲೆ, ಗೆರೆ ಮತ್ತು ಬಣ್ಣದ ರಂಗೋಲಿಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. 

ಆಯುಧ ಪೂಜೆಯಂದು ಅಲಂಕೃತ ವಾಹನಗಳು ಸಂಜೆ ೭ಕ್ಕೆ ಗಾಂಧಿ ಮೈದಾನ ತಲುಪಬೇಕು. ಬಸ್, ಲಾರಿ, ಜೆಸಿಬಿ ತೀರ್ಪು ಹೊಸ ಬಸ್ ನಿಲ್ದಾಣದಲ್ಲಿ ಸಂಜೆ ೬ ರಿಂದ ೬.೩೦ರವರೆಗೆ, ಅಂಗಡಿಗಳ ತೀರ್ಪು ದಸರಾ ದಿನ ರಾತ್ರಿ ೯ ರಿಂದ ೧ ಗಂಟೆಯವರೆಗೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಎಂ.ಚೇತನ್, ಪ್ರದಾನ ಕಾರ್ಯದರ್ಶಿ ಪ್ರಸಾದ್, ಮೈಕಲ್ ಮಾರ್ಷಲ್ ಇದ್ದರು.