ಮಡಿಕೇರಿ ದಸರಾ ಸಮಿತಿ ಕಛೇರಿ ಉದ್ಘಾಟನೆ - ಲೋಗೋ ಅನಾವರಣ
admincoorgdaily

ಮಡಿಕೇರಿ ಸೆ.11- ಮಡಿಕೇರಿ ನಗರ ದಸರಾ ಸಮಿತಿಯ ಕಛೇರಿ ಉದ್ಘಾಟನೆ ಮತ್ತು ದಸರಾ ಲೋಗೋ ಅನಾವರಣ ಜರುಗಿತು.
ನಗರಸಭಾ ಸಂಕೀಣ೯ದಲ್ಲಿ ದಸರಾ ಕಛೇರಿಯಲ್ಲಿ ಗಣಪತಿ ಹೋಮ ಮೂಲಕ ದಸರಾ ಕಛೇರಿಗೆ ಚಾಲನೆ ನೀಡಲಾಯಿತು. ಅಂತೆಯೇ ಮಡಿಕೇರಿ ನಗರ ದಸರಾ ಸಂಬಂಧಿತ ಲೋಗೋವನ್ನು ಈ ಸಂದಭ೯ ಅನಾವರಣಗೊಳಿಸಲಾಯಿತು.
ಮಡಿಕೇರಿ ನಗರ ಸಭಾ ಅಧ್ಯಕ್ಷೆ ಮತ್ತು ದಸರಾ ಸಮಿತಿಯ ಅಧ್ಯಕ್ಷೆ, ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ, ಖಜಾಂಜಿ ಸಬಿತಾ, ನಗರಸಭೆ ಪಾರಾಯುಕ್ತ ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾಪೂವಯ್ಯ, ದಸರಾ ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ಪೈ, ಜಿ.ಚಿದ್ವಿಲಾಸ್, ಸಾಂಸ್ಕೖತಿಕ ಸಮಿತಿಯ ಗೌರವ ಸಲಹೆಗಾರ ಅನಿಲ್ ಹೆಚ್.ಟಿ., ದಸರಾ ಸಮಿತಿ ಪ್ರಮುಖರಾದ ಎ.ಸಿ.ದೇವಯ್ಯ, ಅಜ್ಜೇಟಿರ ಲೋಕೇಶ್, ವಿನು ಈರಪ್ಪ, ನವೀನ್ ಅಂಬೆಕಲ್. ಮುದ್ದುರಾಜ್, ರವಿ, ಮುನೀರ್ ಮಾಚರ್, ದಸರಾ ಸಮಿತಿ ವ್ಯವಸ್ಥಾಪಕ ಶಶಿಕುಮಾರ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಶ್ರೀಕೖಷ್ಣ ಉಪಾಧ್ಯಾಯ ಅವರು ದೈವಿಕ ಕಾಯ೯ಗಳನ್ನು ಕೈಗೊಂಡರು. ಈ ವಷ೯ ಮಡಿಕೇರಿ ದಸರಾ ಸಂದಭ೯ ನಾಲ್ಕು ಶಕ್ತಿದೇವತೆಗಳ ಕರಗ ಪೂಜೆಯು ಅಕ್ಟೋಬರ್ 11 ರಂದು ಭಾನುವಾರ ಜರುಗಲಿದ್ದು, ಗಾಂಧಿ ಮೈದಾನದಲ್ಲಿ ಅ.12 ರಂದು ಸೋಮವಾರದಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು ಪ್ರಾರಂಭವಾಗಲಿದೆ.