ಮಡಿಕೇರಿ ದಸರಾಗೆ ಸ್ಟಾರ್ ಮೆರಗು - ಆಯುಧ ಪೂಜೆಗೆ ಪೂವಮ್ಮ, ವಾಸುಕಿ ವೈಭವ್, ಅನನ್ಯ ಭಟ್ ಎಂಟ್ರಿ!
admincoorgdaily

ಮಡಿಕೇರಿ: ಮಡಿಕೇರಿ ದಸರಾ ಉತ್ಸವದ ಆಯುಧ ಪೂಜೆಯಂದು ಕೊಡಗಿನ ಹೆಮ್ಮೆಯ ಓಟಗಾರ್ತಿ ಎಂ.ಆರ್.ಪೂವಮ್ಮ, ಖ್ಯಾತ ಗಾಯಕರಾದ ವಾಸುಕಿ ವೈಭವ್ ಮತ್ತು ಅನನ್ಯ ಭಟ್ ಆಗಮಿಸಲಿದ್ದಾರೆ ಎಂದು ದಸರಾ ಸಮಿತಿ ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ಕುಮಾರ್ ತಿಳಿಸಿದ್ದಾರೆ.
ಅ.೧೧ರಿಂದ ಕರಗ ಉತ್ಸವ ಆರಂಭವಾಗಿದೆ. ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ದಸರಾಕ್ಕೆ ಶಾಸಕ ಡಾ.ಮಂತರ್ ಗೌಡ ಪ್ರಯತ್ನದಿಂದ ದಾಖಲೆಯ ೨ ಕೋಟಿ ಅನುದಾನ ಬಂದಿದೆ. ಅನುದಾನದ ಬಹುಪಾಲು ಕರಗ ಮತ್ತು ದಶಮಂಟಪಗಳಿಗೆ ಮೀಸಲಾಗಿದ್ದು, ೫೦ ಲಕ್ಷದಲ್ಲಿ ಉತ್ಸವ ನಿರ್ವಹಿಸಲಾಗುತ್ತಿದೆ. ಆಯುಧ ಪೂಜೆಯಂದು ಪೂವಮ್ಮ ಅವರಿಗೆ ವಿಶೇಷ ಸನ್ಮಾನ ನಡೆಯಲಿದ್ದು, ಸಂಜೆ ವಾಸುಕಿ ವೈಭವ್ ಮತ್ತು ಅನನ್ಯ ಭಟ್ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ದಶಮಂಟಪ ಸಮಿತಿ ಅಧ್ಯಕ್ಷ ಪಾಂಡೀರ ಪೂಣಚ್ಚ ಇದ್ದರು.