Kodagu

ಮಡಿಕೇರಿ ದಸರಾದಲ್ಲಿ ಕಾಫಿ ಘಮ;54 ಮಳಿಗೆಗಳಲ್ಲಿ ಕಾಫಿ ಲೋಕ ಅನಾವರಣ

admincoorgdaily

ಮಡಿಕೇರಿ ದಸರಾದಲ್ಲಿ ಕಾಫಿ ಘಮ;54 ಮಳಿಗೆಗಳಲ್ಲಿ ಕಾಫಿ ಲೋಕ ಅನಾವರಣ
ಮಡಿಕೇರಿ ; ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕಷ೯ಣೆಗಳಲ್ಲೊಂದಾದ ಕಾಫಿ ದಸರಾಕ್ಕೆ ಸಕಲ ಸಿದ್ದತೆಗಳು ಪೂಣ೯ಗೊಂಡಿದೆ. ಈ ಬಾರಿ 2 ದಿನಗಳು ನಡೆಯುವ ಕಾಫಿ ದಸರಾದಲ್ಲಿ 54 ಮಳಿಗೆಗಳಲ್ಲಿ ಕಾಫಿಗೆ ಸಂಬಂಧಿಸಿದಂತೆ ಪ್ರದಶ೯ನ ಮತ್ತು ಮಾರಾಟ ಇರಲಿದೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ  ನೀಡಿದ್ದಾರೆ.

ಅ. 13 ರಂದು ಮಂಗಳವಾರ ಸಂಜೆ 4 ಗಂಟೆಗೆ ಕಲಾಸಂಭ್ರಮ ಸಭಾಂಗಣದಲ್ಲಿ ಕಾಫಿ ದಸರಾ ಅಂಗವಾಗಿನ ಮಳಿಗೆಗಳನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ರಾತ್ರಿ 10 ಗಂಟೆಯವರೆಗೂ ಸಾವ೯ಜನಿಕರಿಗಾಗಿ ಈ ಮಳಿಗೆಗಳು ತೆರೆದಿರುತ್ತವೆ.

ಇದೇ ಸಂದಭ೯ ಸಂಜೆ 6 ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ನಗರದ ಸ್ಚಚ್ಚತೆ ಕಾಪಾಡುವ  60 ಪೌರಕಾಮಿ೯ಕರನ್ನು  ಶಾಸಕರಾದ ಡಾ.ಮಂತರ್ ಗೌಡ ಸನ್ಮಾನಿಸಿ ಗೌರವಿಸಲಿದ್ದಾರೆ.ಈ ಮೂಲಕ ನಗರದ ಸ್ವಚ್ಚತೆ ಕಾಪಾಡುವ ಸ್ವಚ್ಚತಾ ರಾಯಭಾರಿಗಳಿಗೆ ಕಾಫಿ ದಸರಾ ಮೂಲಕ ಗೌರವ ನೀಡಲಾಗುತ್ತದೆ ಎಂದೂ ಅನಿಲ್ ಮಾಹಿತಿ ನೀಡಿದ್ದಾರೆ.
ಅ.14 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೂ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ದಸರಾ ಉದ್ಘಾಟನೆಯಾಗಲಿದ್ದು, ಕಾಫಿ ಕೖಷಿ, ಕಾಫಿ ಕೆಫೆ ಸಂಬಂಧಿತ ಮಾಹಿತಿ ಗೋಷ್ಟಿಗಳು, ಸಾಧಕರಾದ 13 ಕೖಷಿಕರಿಗೆ ಸನ್ಮಾನ ನೆರವೇರಲಿದೆ. 8 ವಿಭಾಗಗಳಲ್ಲಿ ಕಾಫಿ ಖಾದ್ಯಗಳ ಸ್ಪಧೆ೯ ಕೂಡ ಆಯೋಜಿತವಾಗಿದೆ.  ಅಂದು ಕೂಡ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾಫಿ ಮಳಿಗೆಗಳು ಸಾವ೯ಜನಿಕರಿಗೆ ತೆರೆದಿರುತ್ತವೆ.