ಮಡಿಕೇರಿ ದಸರಾ ಕರಗೋತ್ಸವ ಅ.11ರಿಂದ ಆರಂಭ: ಅ.21ರಂದು ವಿಜಯದಶಮಿ ಶೋಭಾಯಾತ್ರೆ
admincoorgdaily

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಕರಗೋತ್ಸವ ಅ.೧೧ರಿಂದ ಆರಂಭವಾಗಲಿದ್ದು, ಅ.೨೧ರಂದು ವಿಜಯದಶಮಿಯಂದು ಕರಗಗಳ ಶೋಭಾಯಾತ್ರೆ ನಡೆಯಲಿದೆ ಎಂದು ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ರವಿಕುಮಾರ್ ತಿಳಿಸಿದ್ದಾರೆ.
ನಗರದ ಗೌಳಿ ಬೀದಿಯ ದೇವಾಲಯದಲ್ಲಿ ಸೆಪ್ಟೆಂಬರ್ ೧೬ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅ.೧೧ರಂದು ನಗರದಲ್ಲಿ ಕರಗೋತ್ಸವಕ್ಕೆ ಚಾಲನೆ ಈಡಲಾಗುವುದು. ನಂತರ ೧೦ ದಿನಗಳ ಕಾಲ ನಾಲ್ಕು ಶಕ್ತಿ ದೇವತೆಗಳಾದ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ಕರಗಗಳು ನಗರ ಪ್ರದಕ್ಷಿಣೆ ನಡೆಸಲಿವೆ. ಅ.೨೧ರಂದು ಶೋಭಯಾತ್ರೆ ಮತ್ತು ಕರಗೋತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷ ಜಗದೀಶ್ ಮಾತನಾಡಿ, ದಸರಾಗೆ ೨ ಕೋಟಿ ಅನುದಾನ ಬಂದಿದ್ದು, ದಶಮಂಟಪಗಳಂತೆ ಕರಗ ಸಮಿತಿಗಳಿಗೂ ಸಮಾನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ದಾಸ್, ಪ್ರದಾನ ಕಾರ್ಯದರ್ಶಿ ಗಣೇಶ್, ಗೌರವಾಧ್ಯಕ್ಷರಾದ ಬಾಲಕೃಷ್ಣ, ಲೋಕನಾಥ್ ಉಪಸ್ಥಿತರಿದ್ದರು.