Kodagu

ಮಡಿಕೇರಿ ದಸರಾ: ದಶಮಂಟಪ ಸ್ಪರ್ಧೆಯಲ್ಲಿ ಕರವಲೆ ಭಗವತಿಗೆ ಪ್ರಥಮ ಸ್ಥಾನ

admincoorgdaily

ಶ್ರೀ ಕರವಲೆ ಭಗವತಿ

ಮಡಿಕೇರಿ:ಮಡಿಕೇರಿ ದಸರಾ ದಶಮಂಟಪ ಸ್ಪರ್ಧೆಯಲ್ಲಿ ಶ್ರೀ ಕರವಲೆ ಭಗವತಿ ದೇವಾಲಯ ಮಂಟಪ ಪ್ರಥಮ ಬಹುಮಾನ ಪಡೆದುಕೊಂಡಿದೆ. ಕಾಳಿಂಗ ಮರ್ದನ ಕಥೆಯನ್ನು ಬಿಂಬಿಸಿದ್ದ ಈ ಮಂಟಪ ತೀರ್ಪುಗಾರರ ಮೆಚ್ಚುಗೆ ಗಳಿಸಿತು.

ಶ್ರೀ ಕಂಚಿ ಕಾಮಾಕ್ಷಿ ಮಂಟಪ (ಕಾರ್ತಿಕೇಯನಿಂದ ತಾರಕಾಸುರ ಸೋದರರ ಸಂಹಾರ ಕಥೆ) ದ್ವಿತೀಯ ಹಾಗೂ ಶ್ರೀ ಕೋಟೆ ಮಾರಿಯಮ್ಮ ಮಂಟಪ (ಧೂಮ್ರವರ್ಣನಿಂದ ಧೂಮ್ರಾಕ್ಷ ಸಂಹಾರ ಕಥೆ) ತೃತೀಯ ಬಹುಮಾನ ಪಡೆದುಕೊಂಡಿದೆ.