ಅ.15 ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ:ನಾಡ ಹಬ್ಬಕ್ಕೆ ಸಾಹಿತ್ಯಿಕ ಸ್ಪರ್ಶ ನೀಡಲಿದ್ದಾರೆ 85 ಕವಿಗಳು
admincoorgdaily

ಮಡಿಕೇರಿ, ಅ. 11: ಮಡಿಕೇರಿ ದಸರಾ ಜನೋತ್ಸವಕ್ಕೆ ಶತಮಾನಕ್ಕೂ ಹೆಚ್ಚಿನ ಭವ್ಯ ಇತಿಹಾಸವಿದೆ. ಇಂತಹ ನಾಡ ಹಬ್ಬಕ್ಕೆ ಸಾಹಿತ್ಯದ ಸ್ಪರ್ಶವನ್ನು ನೀಡುವ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಈ ಬಾರಿ ಅಕ್ಟೋಬರ್ 15 ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಗಾಂಧಿ ಮೈದಾನ ರಸ್ತೆಯಲ್ಲಿರುವ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ಬಳಿಕ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾಗಿರುವ ಉಜ್ವಲ್ ರಂಜಿತ್ ಅವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಆಯೋಜಿತ ಬಹುಭಾಷಾ ಕವಿಗೋಷ್ಠಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್ ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಡಗು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಹಾಗೂ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಶ್ರೀಧರ್ ಆರ್. ಹೆಗಡೆ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊಫೆಸರ್ ಹಾಗೂ ಪರಸಂಗ ಚಲನಚಿತ್ರದ ‘ಮರಳಿ ಬಾರದೂರಿಗೆ ನಿನ್ನ ಪಯಣ’ ಹಾಡಿನ ಹೆಸರಾಂತ ಸಾಹಿತಿ ಡಾ. ಎನ್.ಕೆ. ಲೋಲಾಕ್ಷಿ ಅವರು ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್, ಕೊಡಗು ರೈತ ಹೋರಾಟ ಸಮಿತಿ ಅಧ್ಯಕ್ಷರಾದ ಚಕ್ರವರ್ತಿ ಸುರೇಶ್, ಮಡಿಕೇರಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್, ರೆಡ್‌ಕ್ರಾಸ್ ಕೊಡಗು ಘಟಕದ ಸಭಾಪತಿಗಳಾದ ಬಿ.ಕೆ. ರವೀಂದ್ರ ರೈ, ಕೊಡಗು ವೈದ್ಯಕೀಯ ಕಾಲೇಜಿನ ನಿವೃತ್ತ ಮುಖ್ಯ ಆಡಳಿತಾಧಿಕಾರಿ (ಪ್ರ) ಬಿದ್ದಾಟಂಡ ಮೇರಿ ನಾಣಯ್ಯ, ಮೈಸೂರು ಲಕ್ಷ್ಮಿಪುರಂನ ಸರಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಕೆ.ಎಲ್. ರೋಹಿಣಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ಮಡಿಕೇರಿ ನಗರ ದಸರಾ ಸಮಿತಿಯ ಅಧ್ಯಕ್ಷರಾದ ಪಿ. ಕಲಾವತಿ, ನಗರ ದಸರಾ ಸಮಿತಿ ಉಪಾಧ್ಯಕ್ಷರಾದ ಮಹೇಶ್ ಜೈನಿ, ಸಮಿತಿಯ ಕಾರ್ಯಾಧ್ಯಕ್ಷರಾದ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಉಪಸ್ಥಿತರಿರುತ್ತಾರೆ.
ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಕವಲಪಾರ ತಿಳಿಸಿದ್ದಾರೆ.
ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳ ವಿವರ;
ಕನ್ನಡ ವಿಭಾಗ ; ಶ್ವೇತಾ ಕೆ. ಎಂ., ಮಮತಾ ದಿನೇಶ್, ಮಾಲಾಮೂರ್ತಿ, ಸತೀಶ್ ಡಿ.ಪಿ ಕೊಡ್ಲಿಪೇಟೆ, ಫರ್ಹಾನಾಜ್ ಮಸ್ಕಿ, ಪವಿತ್ರ ಹೆತ್ತೂರು, ಕುಕ್ಕುನೂರು ರೇಷ್ಮಾ ಮನೋಜ್, ಸುಶ್ಮಿತಾ ಉಗ್ರಾಣಿಮನೆ, ಪುಷ್ಪ ಡಿ.ಎಚ್., ಪವನ್ ತಂಬಂಡ, ಶಿಲ್ಪ ಬಿ.ವಿ., ದೀಪಿಕಾ ಸುದರ್ಶನ್, ಪ್ರವೀಣ್ ಕುಮಾರ್ ಹೆಚ್.ಎಸ್., ಅನನ್ಯ ಎಚ್. ಸುಬ್ರಹ್ಮಣ್ಯ, ಅಯ್ಯೇಟಿ ಶ್ರುತಿವೈದ್ಯ, ಟಿ.ಕೆ. ತಮ್ಮಯ್ಯ, ರಾಜೇಶ ಜಿ- ಬಳ್ಳಾರಿ ಕೊಪ್ಪಳ, ಆಶಾ ಶುಭಾಕರ್, ವಿಜಯಶ್ರೀ ಅನಿಲ್ ಕೆದಿಲಾಯ, ಸುಶ್ಮಿತ ಎಂ.ಎಸ್., ಜಯಲಕ್ಷ್ಮಿ ಎಂ.ಬಿ., ಆಂಡಮಾಡ ಚರಿತ್ರ ಪವನ್, ನಾ ಕನ್ನಡಿಗ (ಟೋಮಿ ಥೋಮಸ್), ಪೂರ್ಣಿಮಾ ಜೋಶಿ, ಚೇತನ್ ಬಿ.ಎಸ್., ಶಿವೈ ವೈಲೇಶ ಪಿ.ಎಸ್., ಮುಕ್ಕಾಟಿ ಹರಿಣಿ ಗಿರೀಶ್, ಹೇಮಲತಾ ಪೂರ್ಣಪ್ರಕಾಶ್, ರಾಕ್ಮಿ ಪ್ರವೀಣ್ ಎಂ.ಜಿ., ರುಚಿತಾ ಎಸ್., ಪದ್ಮಾವತಿ ಎ.ಡಿ., ಮಂಜುನಾಥ್ ಹೆಚ್. ಚಿರಕನಹಳ್ಳಿ.
ತುಳು ವಿಭಾಗ : ಎಂ. ಮನ್ಮಥ ಆಚಾರ್ಯ ಕೊಂಬಾರು-ಕಡಬ, ಉಮೇಶ್ ಆಚಾರ್ಯ-ಉಡುಪಿ, ಚೈತ್ರ ಬೆಳ್ಳರಿಮಾಡು, ಪಿ.ಯು. ಸುಂದರ, ರೇಣುಕಾ ಸುಧೀರ್
ಕೊಡವ ವಿಭಾಗ : ಆರತಿ ಪೂಣಚ್ಚ ಕುಪ್ಪಂಡ, ಕುಮ್ಮಂಡ ಮೈನಾ ಚಂಗಪ್ಪ, ಬಾದುಮಂಡ ಬೀನಾ ಕಾಳಯ್ಯ, ಡಾ. ಸಿ. ವಾಣಿ ರಾಘವೇಂದ್ರ, ಪ್ರೀತು ಗಣೇಶ್.
ಅರೆಭಾಷೆ ವಿಭಾಗ : ಕಟ್ರತನ ಲಲಿತಾ ಅಯ್ಯಣ್ಣ, ಕಡ್ಲೇರ ಜಯಲಕ್ಷ್ಮಿ ಮೋಹನ್ ಕುಮಾರ್, ವಿಮಲಾರುಣ ಪಡ್ಡಂಬೈಲು, ಕೋಟೇರ ಶ್ರುತಿ ಕಿಶೋರ್, ಕೊಂಪುಳಿರ ಇಂದಿರಾ ದೇವಯ್ಯ.
ಹಿಂದಿ ವಿಭಾಗ : ಕೂತಂಡ ಪೂಜಾ ಜಗತ್, ಶಿವದೇವಿ ಅವನೀಶಚಂದ್ರ ಚೆಟ್ಟಿಮಾನಿ, ಸವಿತ ಕರ್ಕೇರ ಕಾವೂರು, ಕಣಜಾಲು ಪೂವಯ್ಯ.
ಚುಟುಕು ವಿಭಾಗ: ಅನೀಶಾ ಎಂ.ಎಸ್., ಬೈಮನ ಎಂ. ಸುರೇಶ್.
ಮಕ್ಕಳ ಕವನ ವಿಭಾಗ: ಜಶಿಕ ಎ.ಪಿ. (ಕನ್ನಡ), ಜಶ್ವತ್ ವೈ.ಟಿ. (ಕನ್ನಡ), ಮುಕ್ಕಾಟಿ ಜಸ್ವಿನ್ ತಿಮ್ಮಯ್ಯ (ಕನ್ನಡ), ತೇಜಸ್ ಎಸ್. (ಕನ್ನಡ), ಅಕ್ಷರ ತಂಗಮ್ಮ ಟಿ.ಪಿ.(ಕನ್ನಡ), ಕನಿಷ್ ಗೌಡ ಯು.ಕೆ. (ಕನ್ನಡ), ತಿಷ್ಯಾ ಪೊನ್ನೇಟಿ (ಕನ್ನಡ), ಅಂಜಲಿ ಪಿ.ಎಸ್. (ಕನ್ನಡ), ಏಕಾಕ್ಷ್ ಕಲ್ಲುಮುಟ್ಲು(ಇಂಗ್ಲಿಷ್), ಎಸ್.ಪಿ. ಜನ್ಮಿತ (ಇಂಗ್ಲಿಷ್), ಪ್ರಥಮ್ ಚಿನ್ನಪ್ಪ ಬಾಡನ (ಇಂಗ್ಲಿಷ್), ಪೂರ್ವಿಕ ದೇವಯ್ಯ ಕೆ. (ಇಂಗ್ಲಿಷ್), ಯಶಿಕ ದೇವಯ್ಯ ಕೆ. (ಇಂಗ್ಲಿಷ್), ಹಮ್ದನ್ ಹೆಚ್.ಎಸ್. (ಹಿಂದಿ), ಪರಮ್ ಎಸ್ (ಹಿಂದಿ)
ಇತರೆ ಭಾಷೆ ವಿಭಾಗ : ಜೀವಿತಾ ಕೆ. ಆರ್. (ಇಂಗ್ಲಿಷ್), ಸಹನಾ ಕಾಂತಬೈಲು (ಹವ್ಯಕ), ಭಾಗಿರಥಿ ಹುಲಿತಾಳ (ಹವ್ಯಕ), ಜೌಹರ್ ಅಲಿ ಅಡ್ಡೂರು (ಬ್ಯಾರಿ), ತನ್ಸೀರಾ ಆತೂರು (ಬ್ಯಾರಿ), ವಹೀದ್ ಜಾನ್ (ದಖನಿ ಉರ್ದು), ಸುಶೀಲಾ ಕೆ. ಎಂ. (ಮಲಯಾಳಂ), ರಿನಾ ನಾರಾಯಣ (ಮಲಯಾಳಂ), ಪ್ರೀತಮ್ ಮಿಜಾರ್ (ಕೊಂಕಣಿ), ಎಸ್. ಕೆ. ಈಶ್ವರಿ (ಕೊಂಕಣಿ), ಲಕ್ಷ್ಮಿ ಜಿ.ಸಿ. (ತೆಲುಗು), ಕಿಗ್ಗಾಲು ಜಿ. ಹರೀಶ್ (ಕನ್ನಡ ಗಝಲ್), ಪುಷ್ಪ ಪ್ರಸಾದ್ (ಕುಂಬಾರ), ಸುನಿತ ವಿಶ್ವನಾಥ್ ಹೆಚ್.ವಿ. (ಕುಂಬಾರ), ದಿನೇಶ್ ಚೇಂಪಿ (ಕುಂದಾಪುರ ಕನ್ನಡ), ಪವಿತ್ರ ಎಂ. (ಜೇನು ಕುರುಬ), ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ (ಮರಾಠಿ)
ಇವರುಗಳು ಕವಿಗೋಷ್ಠಿ ವೇದಿಕೆಯಲ್ಲಿ ಕವನ ವಾಚನ ಮಾಡಲಿದ್ದಾರೆ ಎಂದು ರಂಜಿತ್ ಕವಲಪಾರ ಮಾಹಿತಿ ನೀಡಿದ್ದಾರೆ.